– 20 ಚೀನಿ ಸೈನಿಕರಿಗೆ ಗಾಯ, ನಾಲ್ವರು ಭಾರತೀಯ ಯೋಧರಿಗೆ ಗಾಯ
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಮತ್ತೆ ಸಂಘರ್ಷ ಏರ್ಪಟ್ಟಿದೆ. ಜನವರಿ 20ರಂದು ಸಿಕ್ಕಿಂನಲ್ಲಿ ಎರಡೂ ದೇಶಗಳ ಸೈನಿಕರು ಮುಖಾಮುಖಿಯಾಗಿದ್ದರ ಬಗ್ಗೆ ಭಾರತೀಯ ಸೇನೆ ಖಚಿತಪಡಿಸಿದೆ. ಕೊನೆಗೆ ಎರಡು ಸೇನೆಗಳು ಪ್ರೋಟೊಕಾಲ್ ಪ್ರಕಾರ ಸಮಸ್ಯೆಯನ್ನ ಇತ್ಯರ್ಥ ಮಾಡಿಕೊಂಡಿವೆ.
Advertisement
ಚೀನಾದ ಕೆಲ ಸೈನಿಕರು ಎಲ್‍ಎಸಿ ಬಳಿ ಗಡಿಯೊಳಗೆ ನುಗ್ಗಲು ಯತ್ನಿಸಿದ್ದರು. ಒಳ ನುಸುಳುವಿಕೆಯನ್ನ ತಡೆಯಲು ಮುಂದಾದ ಭಾರತೀಯ ಸೈನಿಕರ ಜೊತೆ ಚೀನಿಯರು ಕೈ ಕೈ ಮಿಲಾಯಿಸಿದ್ದಾರೆ. ಈ ಜಟಾಪಟಿಯಲ್ಲಿ 20 ಚೀನಿ ಸೈನಿಕರು ಮತ್ತು ನಾಲ್ವರು ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಸೈನಿಕರು ಗಾಯಗೊಂಡಿರುವ ಬಗ್ಗೆ ಸೇನೆ ಯಾವುದೇ ಮಾಹಿತಿ ನೀಡಿಲ್ಲ.
Advertisement
Advertisement
17 ದಿನದ ಹಿಂದೆಯೂ ಒಳನುಸುಳಲು ಯತ್ನ: ಜನವರಿ 8ರಂದು ಚೀನಿ ಸೈನಿಕ ಪೂರ್ವ ಲಡಾಕ್ ನ ಪೈಗ್ನಾಸ್ ತ್ಸೋ ಲೇಕ್ ಬಳಿ ದೇಶದ ಗಡಿಯೊಳಗೆ ಒಳನುಸುಳಲು ಯತ್ನಿಸಿದಾಗ ವಶಕ್ಕೆ ಪಡೆದುಕೊಳ್ಳಲಾಗಿತ್ತು. ನಂತರ ಎರಡು ದಿನಗಳ ಬಳಿಕ ಸೈನಿಕನನ್ನ ಚೀನಾಗೆ ಹಸ್ತಾಂತರಿಸಲಾಗಿತ್ತು. ತಮ್ಮ ಸೈನಿಕ ಮಾರ್ಗ ತಪ್ಪಿದ್ದರಿಂದ ಭಾರತದ ಗಡಿ ಪ್ರವೇಶಿಸಿದ್ದ ಎಂದು ಚೀನಾ ಸ್ಪಷ್ಟನೆ ನೀಡಿತ್ತು.
Advertisement
ಅಕ್ಟೋಬರ್ ನಲ್ಲಿ ಡೆಮಚೊಕ್ ಸೆಕ್ಟರ್ ಬಳಿ ಭಾರತದ ಗಡಿ ಪ್ರವೇಶಿಸಿದ್ದ ಚೀನಿ ಸೈನಿಕನನ್ನು ಬಂಧಿಸಿದ್ದ ಸೇನೆ ಚುಶುಲ್-ಮಾಲ್ಡೋ ಮೀಟಿಂಗ್ ಪಾಯಿಂಟ್ ಬಳಿಕ ಅಕ್ಟೋಬರ್ 21ರಂದು ಚೀನಾಗೆ ಹಸ್ತಾಂತರಿಸಿತ್ತು. ಚೀನಿ ಸೈನಿಕ ಎರಡು ದಿನ ಭಾರತದ ವಶದಲ್ಲಿದ್ದನು.