ನವದೆಹಲಿ : ಪೂರ್ವ ಲಡಾಕ್‍ನಲ್ಲಿ ಭಾರತ ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಎರಡು ಸೇನೆಗಳ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ. ಚೀನಾ ಬದಿಯ ಎಲ್‍ಎಸಿ ಮೊಲ್ಡೊದಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಸಭೆ ನಡೆಯಲಿದೆ.
ಗಡಿ ಪ್ರದೇಶದಲ್ಲಿ ಹೆಚ್ಚುವರಿ ಸೇನೆ ನಿಯೋಜನೆ ವಿಚಾರವಾಗಿ ಸಭೆ ನಡೆಯುತ್ತಿದೆ. ಗಡಿ ಪ್ರದೇಶದಿಂದ ಸೇನೆ ಹಿಂಪಡೆಯುವ ಬಗ್ಗೆ ಭಾರತೀಯ ಸೇನೆ ಚರ್ಚೆ ಮಾಡಲಿದೆ ಎಂದು ಸೇನಾ ಮೂಲಗಳು ಹೇಳಿವೆ.
Advertisement
Advertisement
ಈ ಹಿಂದೆ ನಡೆದ ಎರಡು ಸಭೆಯ ಬಳಿಕ ಪ್ಯಾಂಗಾಂಗ್ ತ್ಸೋ ಸರೋವರ, ಬಿಸಿ ನೀರಿನ ಬುಗ್ಗೆ, ಗಾಲ್ವಾನ್ ನದಿ ಕಣಿವೆಯ ಪಾಯಿಂಟ್ ನಂಬರ್ 14, 16, 17 ರಿಂದ ಸೇನೆಯನ್ನು ಚೀನಾ ಹಿಂಪಡೆದುಕೊಂಡಿತ್ತು. ಇಂದಿನ ಸಭೆಯಲ್ಲಿ ಫಿಂಗರ್ ಪ್ರದೇಶದ ಸೇನೆ ನಿಷ್ಕ್ರಿಯಗೊಳಿಸುವ ಕುರಿತು ಉಭಯ ಸೇನೆಯ ಮುಖ್ಯಸ್ಥರು ಭಾಗಿಯಾಗಲಿದ್ದಾರೆ.
Advertisement