ಸಿಡ್ನಿ: ಭಾರತ ಟೆಸ್ಟ್ ಕ್ರಿಕೆಟ್ ಕೈಬಿಟ್ಟರೆ ಆ ಮಾದರಿ ಸಾವನ್ನಪ್ಪುತ್ತದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೇಗ್ ಚಾಪೆಲ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವ ಕ್ರಿಕೆಟ್‍ನಲ್ಲಿ ಎಲ್‍ಬಿಡಬ್ಲೂ ಕುರಿತು ಪ್ರಸ್ತುತ ಇರುವ ನಿಯಮಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ಹೇಳಿರುವ ಗ್ರೇಗ್ ಚಾಪೆಲ್, ಟೆಸ್ಟ್ ಕ್ರಿಕೆಟ್ ಪ್ರಾಮುಖ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳು ಹೊರತು ಪಡಿಸಿದರೆ ಬೇರೆ ಯಾವ ದೇಶಗಳು ಟೆಸ್ಟ್ ಕ್ರಿಕೆಟ್‍ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಚಾಪೆಲ್ ಹೇಳಿದ್ದಾರೆ.
Advertisement
Advertisement
ಚಾಟ್ ಶೋ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಚಾಪೆಲ್, ಸದ್ಯ ಬಹುತೇಕ ಕ್ರಿಕೆಟ್ ಆಡುವ ರಾಷ್ಟ್ರಗಳು ಟಿ20 ಮಾದರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳು ಮಾತ್ರ ಟೆಸ್ಟ್ ಮಾದರಿಗೆ ಪ್ರಾಮುಖ್ಯತೆ ನೀಡುತ್ತಿವೆ. ಈ ಸಮಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಅತ್ಯುತ್ತಮ ಎಂದು ಹೇಳಿದ್ದಾರೆ. ಟೆಸ್ಟ್ ಮಾದರಿ ಜೀವಂತವಾಗಿರುತ್ತದೆ ಎಂಬ ಆಸೆ ಕೊಹ್ಲಿ ಮಾತುಗಳಿಂದ ಅರ್ಥವಾಗುತ್ತಿದೆ. ಒಂದೊಮ್ಮೆ ಭಾರತ ಟೆಸ್ಟ್ ಕ್ರಿಕೆಟ್ ಕೈಬಿಟ್ಟರೆ ಆ ಮಾದರಿ ಸಾವನ್ನಪ್ಪುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಕೊರೊನಾ ಕಾರಣದಿಂದ ಎಲ್ಲಾ ಕ್ರಿಕೆಟ್ ಬೋರ್ಡ್‍ಗಳು ನಷ್ಟ ಅನುಭವಿಸಿವೆ. ಕೆಲ ಬೋರ್ಡ್‍ಗಳು ಆಟಗಾರರಿಗೆ ಅರ್ಧ ವೇತನ ನೀಡುತ್ತಿವೆ. ಕೊರೊನಾದಿಂದ ಪರಿಸ್ಥಿತಿ ತೇರ್ಗಡೆ ಹೊಂದಿದ್ದ ಬಳಿಕ ಹೆಚ್ಚು ಟಿ20 ಮಾದರಿಯ ಕ್ರಿಕೆಟ್ ಪಂದ್ಯಗಳನ್ನು ನಿರ್ವಹಿಸಲು ಹಲವು ದೇಶಗಳು ಚಿಂತನೆ ನಡೆಸಿವೆ. ಬಿಸಿಸಿಐ ಕೂಡ ಇದೇ ಚಿಂತನೆಯಲ್ಲಿದೆ. ಟೆಸ್ಟ್ ಮಾದರಿಯ ಕ್ರಿಕೆಟ್ ಪಂದ್ಯಗಳಿಗಿಂತ ಏಕದಿನ, ಟಿ20 ಮಾದರಿಯ ಪಂದ್ಯಗಳಿಂದ ಹೆಚ್ಚು ಆದಾಯ ಲಭ್ಯವಾಗ ಕಾರಣ ಇಂತಹ ಚಿಂತನೆ ನಡೆದಿದೆ ಎಂದು ಚಾಪೆಲ್ ವಿವರಿಸಿದ್ದಾರೆ.
ಇತ್ತೀಚೆಗಷ್ಟೇ ಆಸ್ಟ್ರೇಲಿಯಾ, ಟೀಂ ಇಂಡಿಯಾ ಟೆಸ್ಟ್ ಟೂರ್ನಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚಾಪೆಲ್, ಈ ಬಾರಿ ಟೀಂ ಇಂಡಿಯಾಗೆ ಸಿರೀಸ್ ಗೆಲುವು ಕಷ್ಟವಾಗಲಿದೆ. ಈ ಹಿಂದೆ ಟೀಂ ಇಂಡಿಯಾ ಟೆಸ್ಟ್ ಸೀರಿಸ್ ಗೆಲುವು ಪಡೆದಿದ್ದರು ಕೂಡ ಮುಂದಿನ ಟೂರ್ನಿಯಲ್ಲಿ ಇದು ಅಷ್ಟು ಸುಲಭವಲ್ಲ. ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಅವರನ್ನು ಬಹುಬೇಗ ಪೆವಿಲಿಯನ್‍ಗೆ ಕಳುಹಿಸಿದರೆ ಟೀಂ ಇಂಡಿಯಾ ಗೆಲ್ಲುವ ಅವಕಾಶ ಇದೆ ಎಂದಿದ್ದರು.