ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಧೂಳ್ ಎಬ್ಬಿಸಿದ ಸಿನಿಮಾ ಕೆಜಿಎಫ್. ಭಾರತೀಯ ಸಿನಿ ಇಂಡಸ್ಟ್ರಿ ಒಮ್ಮೆ ಸ್ಯಾಂಡಲ್ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್ಗೆ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಡುವ ಮೂಲಕ ಭಾರತೀಯ ಚಿತ್ರ ರಂಗದಲ್ಲಿಯೇ ಹೊಸ ಅಲೆ ಎಬ್ಬಿಸಿದ ಕನ್ನಡದ ಕೆಜಿಎಫ್-2 ಚಿತ್ರದ ಬಹು ನಿರೀಕ್ಷಿತ ಟೀಸರ್ ನಿನ್ನೆ ರಾತ್ರಿ ಬಿಡುಗಡೆಯಾಗಿದೆ.
Advertisement
ಟೀಸರ್ ನೋಡಿದ ಅಭಿಮಾನಿಗಳಲ್ಲಿ ಕೆಜಿಎಫ್-2 ಮತ್ತಷ್ಟು ಕೂತೂಹಲ ಕೆರಳಿಸಿದೆ. ಟೀಸರ್ ರಿಲೀಸ್ ಆದ ಒಂದು ಗಂಟೆಯಲ್ಲೇ ಸುಮಾರು 10 ಲಕ್ಷ ವ್ಯೂವ್ಸ್ ಪಡೆದಿದ್ದ ಕೆಜಿಎಫ್ -2, ಯೂಟ್ಯೂಬ್ನಲ್ಲಿ ಶರ ವೇಗದಲ್ಲಿ 20 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ. ಟೀಸರ್ ಫಿದಾ ಆಗಿರುವ ಪ್ರೇಕ್ಷಕರು ಸಿನಿಮಾ ನೋಡಲು ಬಹಳ ಉತ್ಸುಕರಾಗಿದ್ದಾರೆ.
Advertisement
Advertisement
ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನದ ಸಲುವಾಗಿ ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಯೋಜಿಸಿದ್ದ ಚಿತ್ರತಂಡ ನಿನ್ನೆ ಕಿಡಿಗೇಡಿಗಳು ಟೀಸರ್ ಲೀಕ್ ಮಾಡಿದ ಕಾರಣ ನಿನ್ನೆ ರಾತ್ರಿ 9.29 ಕ್ಕೆ ಟೀಸರ್ ರಿಲೀಸ್ ಮಾಡಲಾಯಿತು.
Advertisement
ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರೈ ಮತ್ತು ಸಂಜಯ್ ದತ್ ಅಭಿನಯದ ಕೆಜಿಎಫ್- 2 ಟೀಸರ್ ಯೂಟ್ಯೂಬ್ನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಅತಿ ವೇಗದಲ್ಲಿ 2 ಮಿಲಿಯನ್ಗಿಂತ ಹೆಚ್ಚು ಲೈಕ್ಸ್ ಪಡೆದ ಮೊದಲ ಸಿನಿಮಾ ಆಗಿದೆ. ಎಂದು ಭಾರತೀಯ ಚಲನಚಿತ್ರ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಕೆಜಿಎಫ್- 2 ಸಿನಿಮಾದ ಟೀಸರ್ನಲ್ಲಿನ ಸ್ಕ್ರೀನ್ ಪ್ಲೇ ಪ್ರೇಕ್ಷಕರ ಮನ ಗೆದ್ದಿದ್ದು, ರಾಕಿಂಗ್ ಸ್ಟಾರ್ ಯಶ್ ಹಾಗೂ ಅಧೀರ ಪಾತ್ರಧಾರಿ ಸಂಜಯ್ ದತ್ ಟೀಸರ್ನಲ್ಲಿ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ಬಂದೂಕಿನ ಮೇಲಿರುವ ಕೆಂಪು ಕೆಂಡದಲ್ಲಿ ಸಿಗರೇಟ್ ಹಚ್ಚಿಕೊಳ್ಳುವ ಸೀನ್ ಹಲ್ಚುಲ್ ಎಬ್ಬಿಸಿದೆ.