ನವದೆಹಲಿ: ಭಾರತದ ವಾಯು ಸೇನೆಗೆ ಫ್ರಾನ್ಸ್ ನಿಂದ 5ನೇ ಬ್ಯಾಚ್‍ನ ರಫೇಲ್ ಯುದ್ಧ ವಿಮಾನ ಬಂದು ತಲುಪಿದೆ. ಈ ಮೂಲಕ ಭಾರತೀಯ ವಾಯು ಸೇನೆ ಮತ್ತಷ್ಟು ಬಲಿಷ್ಠಗೊಂಡಿದೆ.
Advertisement
5ನೇ ಬ್ಯಾಚ್‍ನ ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ಸುಮಾರು 8000 ಕಿಲೋ ಮೀಟರ್ ಹಾರಿ ಬಂದು ಭಾರತಕ್ಕೆ ತಲುಪಿದೆ. ಆದರೆ ಎಷ್ಟು ವಿಮಾನಗಳು ಬಂದಿದೆ ಎಂದು ಸ್ಪಷ್ಟಪಡಿಸಿಲ್ಲ. ಕೆಲ ಮೂಲಗಳ ಮಾಹಿತಿ ಪ್ರಕಾರ 4 ರಫೇಲ್ ವಿಮಾನಗಳು ಬಂದಿದೆ ಎಂದು ವರದಿಯಾಗಿದೆ.
Advertisement
Air Chief Mshl RKS Bhadauria on an official tour to France lauds pilots&sees off the next batch of Rafales on a non stop flight to ???????? with mid air refueling by French Air force&UAE.Thanks ???????? esp FASF & French Industry for timely delivery&pilot training on schedule despite covid pic.twitter.com/LNeUu5DL6k
— India in France (@IndiaembFrance) April 21, 2021
Advertisement
ಭಾರತದ ವಾಯುಸೇನೆಯ ಸಿಬ್ಬಂದಿ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ ಅವರು ಫ್ರಾನ್ಸ್ ಪ್ರವಾಸದಲ್ಲಿದ್ದು, ಅವರು ಫ್ರಾನ್ಸ್ ನ ಮೆರಿಗ್ಯ್ನಾಕ್ ವಾಯುನೆಲೆಯಿಂದ ರಫೇಲ್ ಯುದ್ಧ ವಿಮಾನಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟರು ಎಂದು ವರದಿಯಾಗಿದೆ.
Advertisement
ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ ಅವರು ಫ್ರಾನ್ಸ್ ಪ್ರವಾಸದಲ್ಲಿದ್ದು, ಅವರು ಫ್ರಾನ್ಸ್ ನ ಮೆರಿಗ್ಯ್ನಾಕ್ ವಾಯುನೆಲೆಯಿಂದ ರಫೇಲ್ ಯುದ್ಧ ವಿಮಾನಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮಾರ್ಗ ಮಧ್ಯದಲ್ಲಿ ಫ್ರಾನ್ಸ್ ಮತ್ತು ಯುಎಇ ವಾಯು ಪಡೆ ರೀಫ್ಯೂಲಿಂಗ್ ಮಾಡಿ ವಿಮಾನವನ್ನು ಸರಿಯಾದ ಸಮಯಕ್ಕೆ ಕಳುಹಿಸಿ ಕೊಟ್ಟಿದ್ದೀರಿ, ಇದಕ್ಕೆ ಧನ್ಯವಾದಗಳು ಎಂದು ಭಾರತದ ರಾಯಭಾರಿ ಕಚೇರಿ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದೆ.
After a direct ferry from #MerignacAirBase, France, the 5th batch of Rafales arrived in India on 21 Apr. The fighters flew a distance of almost 8,000Kms with air-to-air refuelling support by @Armee_de_lair and UAE AF. IAF thanks both the Air Forces for their co-operation. pic.twitter.com/jp81vODCp2
— Indian Air Force (@IAF_MCC) April 21, 2021
ಭಾರತ 2016ರ ಸೆಪ್ಟೆಂಬರ್ ತಿಂಗಳಲ್ಲಿ ಫ್ರಾನ್ಸ್ ನೊಂದಿಗೆ 58 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್ ಫೈಟರ್ ಜೆಟ್‍ಗಳನ್ನು ಖರೀದಿಸಲು ಭಾರತ ಅಂತರ್-ಸರ್ಕಾರಿ ಒಪ್ಪಂದ ಮಾಡಿಕೊಂಡಿತ್ತು, ಇದರಂತೆ ಈಗಾಗಲೇ ಭಾರತದಲ್ಲಿ 14 ರಫೇಲ್ ಯುದ್ಧ ವಿಮಾನಗಳು ಕಾರ್ಯಾಚರಿಸುತ್ತಿದೆ. ಇದೀಗ ಮತ್ತೆ ನಾಲ್ಕು ವಿಮಾನಗಳು ಸೇರ್ಪಡೆಯೊಂದಿಗೆ ಇದರ ಸಂಖ್ಯೆ 18ಕ್ಕೆ ಏರಿಕೆ ಕಂಡಿದೆ.
ಕಳೆದ ವರ್ಷ ಜುಲೈ 28 ರಂದು ಐದು ಯುದ್ಧ ವಿಮಾನಗಳು ಬಂದಿಳಿದ್ದವು. ಆ ಬಳಿಕ 4 ಹಂತಗಳಲ್ಲಿ ಭಾರತಕ್ಕೆ ರಫೇಲ್ ಯುದ್ಧ ವಿಮಾನ ಬಂದಿಳಿದ್ದಿತ್ತು. ಇದೀಗ 5ನೇ ಹಂತದಲ್ಲಿ ಮತ್ತೆ ರಫೇಲ್ ಬಲ ಹೆಚ್ಚಿದೆ. 2023ರ ವೇಳೆಗೆ ಒಪ್ಪಂದದಂತೆ ಎಲ್ಲಾ 36 ರಫೇಲ್ ವಿಮಾನಗಳು ಭಾರತದಲ್ಲಿರಲಿದೆ.