ನವದೆಹಲಿ: ಭಾರತದ ಬಳಿಕ ಅಮೆರಿಕಾದಲ್ಲಿಯೂ ಚೀನಾ ಮೂಲದ ಆ್ಯಪ್ ಗಳ ನಿಷೇಧಕ್ಕೆ ಚಿಂತನೆ ನಡೆದಿದೆ.
ಅಮೆರಿಕಾದ ಸಚಿವ ಮೈಕ್ ಪಂಪಿಯಾ ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡುವ ಸುಳಿವು ನೀಡಿದ್ದಾರೆ. ಕೆಲ ಕಾರಣಗಳಿಂದಾಗಿ ಟಿಕ್‍ಟಾಕ್ ಸೇರಿದಂತೆ ಚೀನಾದ ಆ್ಯಪ್ ಗಳನ್ನು ಬ್ಯಾನ್ ಮಾಡುವ ಪ್ರಸ್ತಾವಣೆ ನಮ್ಮ ಮುಂದಿದೆ ಎಂದಿದ್ದಾರೆ. ಪಂಪಿಯಾರ ಹೇಳಿಕೆ ಚೀನಾವನ್ನು ಸಂಕಷ್ಟಕ್ಕೆ ತಂದೊಡ್ಡುವ ಲಕ್ಷಣಗಳು ಕಾಣಿಸುತ್ತಿವೆ.
ಭಾರತ ಸಹ ಟಿಕ್‍ಟಾಕ್, ಹೆಲೋ ಸೇರಿದಂತೆ ಒಟ್ಟು 59 ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ. ಹಾಗೆ ದೇಶದ ಉದ್ದಿಮೆದಾರರು ಚೀನಾದ ಜೊತೆಗಿನ ವ್ಯವಹಾರದ ಒಪ್ಪಂದಗಳನ್ನು ಮುರಿದುಕೊಳ್ಳುವ ಮೂಲಕ ಆತ್ಮನಿರ್ಭರ ಭಾರತಕ್ಕೆ ಕೈ ಜೋಡಿಸುತ್ತಿದ್ದಾರೆ. ಟಿಕ್‍ಟಾಕ್ ಬ್ಯಾನ್ ಮಾಡಿದ ಪರಿಣಾಮ ಭಾರತದ ಆ್ಯಪ್ ಗಳ ಬಳಕೆ ಹೆಚ್ಚಾಗಿದೆ. ಮಿತ್ರೋಂ, ಚಿಂಗಾರಿ ಸೇರಿದಂತೆ ಹಲವು ಆ್ಯಪ್ ಗಳ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿದೆ.
US Secretary of State Mike Pompeo says that the United States is "certainly looking at" banning Chinese social media apps, including #TikTok: Reuters
(file pic) pic.twitter.com/fUzJKlQkSk
— ANI (@ANI) July 7, 2020