– 5 ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ 274 ರನ್
– ಶತಕ ಸಿಡಿಸಿ ತಂಡಕ್ಕೆ ಲಬುಶೇನ್ ಆಸರೆ
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್ ನಟರಾಜನ್ ಭಾರತದ ಪರ ವಿಶೇಷ ದಾಖಲೆ ಬರೆದಿದ್ದಾರೆ.
ಒಂದೇ ಅಂತಾರಾಷ್ಟ್ರೀಯ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ನೆಟ್ ಬೌಲರ್ ನಟರಾಜನ್ ಪಾತ್ರರಾಗಿದ್ದಾರೆ.
Advertisement
Advertisement
ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ತಮಿಳುನಾಡು ಮೂಲದ 29 ವರ್ಷದ ನಟರಾಜನ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಈಗ ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾದ ಕಾರಣ ನಟರಾಜನ್ ಬ್ರಿಸ್ಟೇನ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯಕ್ಕೂ ಆಯ್ಕೆ ಆಗಿದ್ದಾರೆ.
Advertisement
ಡಿ. 2 ರಂದು ಟಿ.ನಟರಾಜನ್ ತಮ್ಮ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದರು. 10 ಓವರ್ ಗಳಲ್ಲಿ 70 ರನ್ ಗಳನ್ನು ನೀಡಿ 2 ವಿಕೆಟ್ ಪಡೆದಿದ್ದರು. ಟಿ-20 ಕ್ರಿಕೆಟ್‌ನಲ್ಲಿ 6 ವಿಕೆಟ್ ಪಡೆದಿದ್ದರು.
Advertisement
Labuschagne gets a life! ????
Live #AUSvIND: https://t.co/IzttOVtrUu pic.twitter.com/8FoaapsPGe
— cricket.com.au (@cricketcomau) January 15, 2021
ಟೆಸ್ಟ್ ಕ್ರಿಕೆಟ್ ಗೆ ಸ್ವಾಗತ…. ಒಂದೇ ಪ್ರವಾಸದಲ್ಲಿ ಎಲ್ಲಾ ಮೂರು ಮಾದರಿಯ ಕ್ರಿಕೆಟ್ ಆಡಿದ ಭಾರತದ ಮೊದಲ ಕ್ರಿಕೆಟಿಗ ತಂಗರಸು ನಟರಾಜನ್ ಎಂದು ಬರೆದು ಐಸಿಸಿ ಟ್ವೀಟ್ ಮಾಡಿದೆ.
ಇಂದಿನ ಪಂದ್ಯದಲ್ಲಿ 20 ಓವರ್ ಎಸೆದ ನಟರಾಜನ್ 63 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಇಂದು ನಟರಾಜನ್ ಜೊತೆ ವಾಷಿಂಗ್ಟನ್ ಸುಂದರ್ ಟೆಸ್ಟ್ ಕ್ಯಾಪ್ ಧರಿಸಿದ್ದಾರೆ.
What a moment for Washington Sundar! His first Test wicket is the superstar Steve Smith! #OhWhatAFeeling@Toyota_Aus | #AUSvIND pic.twitter.com/ZWNJsn0QNN
— cricket.com.au (@cricketcomau) January 15, 2021
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 87 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದೆ. ಮಾರ್ನಸ್ ಲಬುಶೇನ್ 108 ರನ್(204 ಎಸೆತ, 9 ಬೌಂಡರಿ), ಮ್ಯಾಥ್ಯು ವೇಡ್ 45 ರನ್(87 ಎಸೆತ, 6 ಬೌಂಡರಿ) ಹೊಡೆದು ಔಟಾಗಿದ್ದಾರೆ. ಕ್ಯಾಮರೂನ್ ಗ್ರೀನ್ 28 ರನ್, ನಾಯಕ ಟೀಮ್ ಪೈನೆ 38 ರನ್ ಗಳಿಸಿದ್ದು ನಾಳೆ ಬ್ಯಾಟಿಂಗ್ ಮುಂದುವರಿಸಲಿದ್ದಾರೆ
ಭಾರತದ ಪರ ಸಿರಾಜ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಕಿತ್ತಿದ್ದಾರೆ.
Welcome to Test cricket, @Natarajan_91 ????
Thangarasu Natarajan becomes the first Indian player to make his International debut across all three formats during the same tour ????#AUSvIND pic.twitter.com/CKltP2uT5w
— ICC (@ICC) January 14, 2021