ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಯಲ್ಲಿ ಭಾರತ ಹೇಗೆ ಪುಟಿದು ಜಯಗಳಿಸಿದೆಯೋ ಅದೇ ರೀತಿ ನಮ್ಮ ಆರ್ಥಿಕತೆಯೂ ಮೇಲಕ್ಕೆ ಏಳಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಕಾಗದ ರಹಿತವಾಗಿ ಬಜೆಟ್ ಮಂಡನೆ ಮಾಡುತ್ತಿರುವ ಅವರು, ನಮ್ಮ ಕ್ರಿಕೆಟ್ ತಂಡ ಹೇಗೆ ಜಯಗಳಿಸಿದೆಯೋ ಅದೇ ರೀತಿ ನಮ್ಮ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ಕೋವಿಡ್ 19ನಿಂದಾಗಿ ಸಮಸ್ಯೆಯಾಗಿದೆ. ಆದರೆ ಆತ್ಮ ನಿರ್ಭರ್ ಭಾರತದ ಅಡಿಯಲ್ಲಿ ಸರ್ಕಾರ ಕೈಗೊಂಡ ಯೋಜನೆಗಳಿಂದ ಆರ್ಥಿಕತೆ ಚೇತರಿಕೆ ಆಗುತ್ತಿದೆ ಎಂದು ತಿಳಿಸಿದರು.
Advertisement
Advertisement
ದಶಲಕ್ಷ ಜನಸಂಖ್ಯೆಗೆ ಹೋಲಿಸಿದರೆ ವಿಶ್ವದಲ್ಲೇ ಅತಿ ಕಡಿಮೆ ಕೋವಿಡ್ 19 ಸಾವು ಮತ್ತು ಸಕ್ರಿಯ ಪ್ರಕರಣಗಳು ಭಾರತದಲ್ಲಿದೆ. ಕೋವಿಡ್ ಸಮಯದಲ್ಲಿ ಪ್ರಕಟಿಸಲಾದ ಯೋಜನೆಗಳಿಗಾಗಿ 27.1 ಲಕ್ಷ ಕೋಟಿ ರೂ. ಅನುದಾನ ಪ್ರಕಟಿಸಲಾಗಿದೆ. ಶೇ.13ರಷ್ಟು ಜಿಡಿಪಿ ಅನುದಾನವನ್ನು ಸರ್ಕಾರ ನೀಡಿದೆ ಎಂದು ತಿಳಿಸಿದರು.
Advertisement
ಭಾರತದಲ್ಲಿ 2 ಲಸಿಕೆ ಲಭ್ಯವಿದ್ದು, ವಿಶ್ವದ 100ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಯನ್ನು ನಾವು ರಫ್ತು ಮಾಡಲಿದ್ದೇವೆ. ಶೀಘ್ರದಲ್ಲೇ ಇನ್ನು 2 ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದರು.
Advertisement