– ಅಮೆರಿಕದ ನ್ಯೂಸ್‌ವೀಕ್‌ನಲ್ಲಿ ವರದಿ
– ಅರ್ಧ ಶತಮಾನದಲ್ಲಿ ಮೊದಲ ಬಾರಿಗೆ ಭಾರತದ ಆಕ್ರಮಣಕಾರಿ ನೀತಿ
ವಾಷಿಂಗ್ಟನ್: ಗಡಿಯಲ್ಲಿ ಭಾರತ ತೋರಿದ ಅನಿರೀಕ್ಷಿತ ನಡೆಯಿಂದ ಚೀನಾ ಆಕ್ರಮಣ ವಿಫಲವಾಗಿದೆ ಎಂದು ಅಮೆರಿಕದ ಪ್ರಮುಖ ನಿಯತಕಾಲಿಕೆ ನ್ಯೂಸ್‌ವೀಕ್ ಹೇಳಿದೆ.
67 ವರ್ಷದ ಕ್ಸಿ ಜಿನ್‌ಪಿಂಗ್ ವಿಫಲವಾಗಿದ್ದಾರೆ. ಚೀನಾ ವಿಫಲವಾಗಿದ್ದಕ್ಕೆ ಕ್ಸಿ ಜಿನ್‌ಪಿಂಗ್ ವಿರುದ್ಧವೇ ಕಮ್ಯೂನಿಸ್ಟ್ ಪಕ್ಷದಲ್ಲಿ ಅಸಮಾಧಾನ ಎದ್ದಿದೆ ಎಂದು ವರದಿಯಾಗಿದೆ.
ತನ್ನ ವಿರುದ್ಧ ಎದ್ದಿರುವ ಅಸಮಾಧಾನವನ್ನು ತಣಿಸಲು ಕ್ಸಿ ಜಿನ್‌ಪಿಂಗ್ ಮತ್ತೊಮ್ಮೆ ಭಾರತದ ಮೇಲೆ ಆಕ್ರಮಣ ಮಾಡಲು ಪಿಎಲ್‌ಎ ಸೈನಿಕರಿಗೆ ಸೂಚಿಸಬಹುದು ಎಂದು ಅದಾಜಿಸಿದೆ.
ವಿಶೇಷವಾಗಿ ಗಲ್ವಾನ್ ಘರ್ಷಣೆಯನ್ನು ಪ್ರಸ್ತಾಪಿಸಿರುವ ನ್ಯೂಸ್‌ವೀಕ್, ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದರೆ ಚೀನಾ ಕಡೆಯಲ್ಲೂ ಸಾವು ಸಂಭವಿಸಿದೆ. ಆದರೆ ಅಲ್ಲಿನ ಸರ್ಕಾರ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಆದರೆ ಚೀನಾದ 43 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಭಾರತಕ್ಕೆ ಮೊದಲ ಪ್ರಾಶಸ್ತ್ಯ – ಚೀನಾಗೆ ಶಾಕ್ ನೀಡಿದ ಲಂಕಾ
ಭಾರತ ಈ ರೀತಿಯ ಪ್ರತಿರೋಧ ತೋರುತ್ತದೆ ಎಂದು ಚೀನಾ ನಿರೀಕ್ಷೆ ಮಾಡಿರಲಿಲ್ಲ. ಅರ್ಧ ಶತಮಾನದಲ್ಲಿ ಮೊದಲ ಬಾರಿಗೆ ಭಾರತ ಚೀನಾ ವಿರುದ್ಧ ಆಕ್ರಮಣಕಾರಿ ನಡೆಯನ್ನು ಅನುಸರಿಸುತ್ತದೆ. ಕಳೆದ ತಿಂಗಳು ಗಡಿಯಲ್ಲಿನ ಆಯಕಟ್ಟಿನ ಸ್ಥಳಕ್ಕೆ ತೆರಳಲು ಚೀನಾ ಮುಂದಾಗಿತ್ತು. ಆದರೆ ಈ ಸ್ಥಳವನ್ನು ನಾವು ತಲುಪುವ ಮೊದಲು ಭಾರತದ ಸೈನಿಕರು ತಲುಪಿದ್ದನ್ನು ನೋಡಿ ಚೀನಿ ಸೈನಿಕರು ಆಶ್ಚರ್ಯಗೊಂಡಿದ್ದರು ಎಂದು ವರದಿಯಲ್ಲಿ ಹೇಳಿದೆ.
ಯುದ್ಧದ ಇತಿಹಾಸ ನೋಡಿದರೆ ಚೀನಾ ಕೊನೆಯ ಬಾರಿ ಯುದ್ಧ ಮಾಡಿರುವುದು 1979ರಲ್ಲಿ. ವಿಯೆಟ್ನಾ ಯುದ್ಧದಲ್ಲಿ ಚೀನಾ ಸೋತಿದೆ. ಆದರೆ ಭಾರತ ಈಗ ಬದಲಾಗಿ ಆಕ್ರಮಣಕಾರಿ ನೀತಿ ಅನುಸರಿಸುತ್ತಿದ್ದು ದಿಟ್ಟ ಉತ್ತರ ನೀಡುತ್ತಿದೆ ಎಂದು ತಿಳಿಸಿದೆ.