ನವದೆಹಲಿ: ಸ್ವಪಕ್ಷೀಯರು, ಎದುರಾಳಿಗಳು ಎನ್ನದೇ ತಮಗೆ ಸರಿ ಎನಿಸಿದ ವಿಷಯದ ಕುರಿತು ಧ್ವನಿ ಎತ್ತುವ ರಾಜ್ಯಸಭಾ ಸದಸ್ಯ ವಿ. ಸುಬ್ರಮಣಿಯನ್ ಸ್ವಾಮಿ, ಇದೀಗ ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ಕುರಿತು ತಮ್ಮದೇ ಶೈಲಿಯಲ್ಲಿ ಪ್ರಶ್ನೆ ಮಾಡಿದ್ದಾರೆ.
— Subramanian Swamy (@Swamy39) February 2, 2021
Advertisement
Advertisement
ಕೇಂದ್ರ ಸರ್ಕಾರ ಪ್ರತಿದಿನ ತೈಲ ಬೆಲೆ ಹೆಚ್ಚಳ ಮಾಡುತ್ತಿದ್ದರೆ. ಇತ್ತ ಸುಬ್ರಮಣಿಯನ್ ಸ್ವಾಮಿ ತೈಲ ಬೆಲೆ ಹೆಚ್ಚಳ ಕುರಿತು ತಮ್ಮದೇ ಶೈಲಿಯಲ್ಲಿ ಕೇಂದ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ. ಶ್ರೀರಾಮನ ತವರು ಭಾರತದಲ್ಲಿ ಲೀಟರ್ ಪೆಟ್ರೋಲ್ ದರ 93 ರೂಪಾಯಿ, ಸೀತೆಯ ತವರು ನೇಪಾಳದಲ್ಲಿ ಲೀಟರ್ ಪೆಟ್ರೋಲ್ ಬೆಲೆ 53 ರೂಪಾಯಿ, ರಾವಣನ ಲಂಕೆಯಲ್ಲಿ 51 ರೂಪಾಯಿ ಎಂದು ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.
Advertisement
Advertisement
ಸ್ವಾಮಿಯ ಈ ಟ್ವೀಟ್‍ನಿಂದ ಕೆರಳಿರುವ ನೆಟ್ಟಿಗರು ಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲಂಕಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 161 ರೂಪಾಯಿಯಿದೆ. ನೇಪಾಳದಲ್ಲಿ 110 ರೂಪಾಯಿ ಇದೆ. ವಾಸ್ತವಾಂಶ ನೋಡಿ ಟ್ವೀಟ್ ಮಾಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.