ಬೆಂಗಳೂರು: ಲಾಕ್‍ಡೌನ್ 4.0 ಮಾರ್ಗಸೂಚಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾನುವಾರ ಮದ್ಯ ಸಿಗಲ್ಲ. ಮೇ 31ರವರೆಗೆ ಪ್ರತಿ ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಹಾಗಾಗಿ ಎಲ್ಲ ವ್ಯಾಪಾರ ಸೇರಿದಂತೆ ಮದ್ಯದಂಗಡಿಗಳು ಬಂದ್ ಆಗಲಿವೆ.
ಅಂತರ್ ಜಿಲ್ಲಾ ಪ್ರಯಾಣಕ್ಕೆ ಕ್ವಾರಂಟೈನ್ ಇಲ್ಲ: ಸಿಎಂ ಯಡಿಯೂರಪ್ಪ#CMYeddyurappa #Lockdown4 #Karnataka #CoronaVirus #COVID19 @CMofKarnataka @BSYBJP @BJP4Karnataka pic.twitter.com/cvT5r6eu5h
— PublicTV (@publictvnews) May 18, 2020
Advertisement
ಲಾಕ್‍ಡೌನ್ 4.0 ಮಾರ್ಗಸೂಚಿ ಹಿನ್ನೆಲೆ ಅಧಿಕಾರಿಗಳು, ತಜ್ಞರ ಜೊತೆ ಸಭೆ ನಡೆಸಿದ ಬಳಿಕ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕಂಟೈನ್‍ಮೆಂಟ್ ಝೋನ್ ಹೊರತು ಪಡಿಸಿ ಉಳಿದ ಭಾಗಗಳಲ್ಲಿ ಸಾರಿಗೆ ವಾಹನಗಳು ಸಂಚರಿಸಲಿದ್ದು, ಒಂದು ಬಸ್ ನಲ್ಲಿ ಕೇವಲ 30 ಜನರು ಪ್ರಯಾಣಿಸಬಹುದಾಗಿದೆ. ಬಸ್ ದರದಲ್ಲಿ ಯಾವುದೇ ಏರಿಕೆಯನ್ನು ಸರ್ಕಾರ ಮಾಡಿಲ್ಲ ಎಂದು ಸಿಎಂ ತಿಳಿಸಿದ್ದಾರೆ.
Advertisement
ಪ್ರತಿ ಭಾನುವಾರ ಕಂಪ್ಲೀಟ್ ಲಾಕ್‍ಡೌನ್#Karnataka #Lockdown #COVID19 @CMofKarnataka @BSYBJP @BJP4Karnataka pic.twitter.com/WVezuqfmnP
— PublicTV (@publictvnews) May 18, 2020
Advertisement
ಮದುವೆಗಳಲ್ಲಿ 50 ಜನಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಆಟೋ, ಕ್ಯಾಬ್‍ಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಟೋ, ಟ್ಯಾಕ್ಸಿಗಳಲ್ಲಿ ಚಾಲಕ ಹೊರತು ಪಡಿಸಿ ಇಬ್ಬರು ಪ್ರಯಾಣ ಮಾಡಬಹುದು. ಮ್ಯಾಕ್ಸಿಕ್ಯಾಬ್ ನಲ್ಲಿ ಚಾಲಕ ಹೊರತು ಪಡಿಸಿ ಮೂವರು ಪ್ರಯಾಣ ಮಾಡಬಹುದು. ಸಂಜೆ 7 ರಿಂದ ರಾತ್ರಿ 7ರವರೆಗೆ ಕಫ್ರ್ಯೂ ಮುಂದುವರಿಯಲಿದೆ. ಜಿಮ್ ಓಪನ್ ಮಾಡುವಂತಿಲ್ಲ, ಕ್ರೀಡಾಂಗಣ ತೆರಯಲಾಗುವುದು ಗುಂಪು ಗುಂಪಾಗಿ ಸೇರುವಂತಿಲ್ಲ. ಪಾನಿಪುರಿ, ಫಾಸ್ಟ್ ಫುಡ್ ಸೇರಿದಂತೆ ಬೀದಿ ಬದಿ ವ್ಯಾಪಾರ ನಡೆಸಬಹುದಾಗಿದೆ.