ಡಬ್ಲಿನ್: ಐರ್ಲೆಂಡ್‍ನ ದೈತ್ಯ ಬ್ಯಾಟ್ಸ್‍ಮ್ಯಾನ್ ಕೆವಿನ್ ಒಬ್ರಿಯಾನ್ ಸಿಕ್ಸ್ ಚಚ್ಚುವ ಮೂಲಕ ತನ್ನ ಕಾರಿನ ಗ್ಲಾಸನ್ನು ಒಡೆದು ಹಾಕಿದ್ದಾರೆ.
ಐರ್ಲೆಂಡ್ ಸ್ಫೋಟಕ ಆಲ್‍ರೌಂಡರ್ ಕೆವಿನ್ ಒಬ್ರಿಯಾನ್, ಸಿಕ್ಸ್ ಚಚ್ಚುವುದರಲ್ಲಿ ಎತ್ತಿದ ಕೈ. ಕೆವಿನ್ ಹೊಡೆದ ಸಿಕ್ಸ್ ಗಳು ಮೈದಾನದ ಆಚೆಗೂ ಹೋಗುತ್ತವೆ. ಈಗ ಸದ್ಯ ಕೆವಿನ್ ಒಬ್ರಿಯಾನ್ ಐರ್ಲೆಂಡ್‍ಮಲ್ಲಿ ನಡೆಯುತ್ತಿರುವ ಅಂತರ ಪ್ರಾಂತೀಯ ಟಿ-20 ಟೂರ್ನಿಯನ್ನು ಆಡುತ್ತಿದ್ದಾರೆ.
????: KEVIN O’BRIEN SMASHES SIX…
…and his own car window. Seriously.#IP2020 | @TestTriangle ☘️???? pic.twitter.com/dKbfDRHrjY
— Cricket Ireland (@cricketireland) August 27, 2020
ಡಬ್ಲಿನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆವಿನ್ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಈ ಪಂದ್ಯದಲ್ಲಿ ಅವರು ಕೇವಲ 37 ಬಾಲಿಗೆ ಬರೋಬ್ಬರಿ 82 ರನ್ ಗಳಿಸಿದ್ದರು. ಇದರಲ್ಲಿ ಎಂಟು ಭರ್ಜರಿ ಸಿಕ್ಸರ್ ಕೂಡ ಸೇರಿದ್ದವು. ಈ ಸಿಕ್ಸರ್ ಗಳಲ್ಲಿ ಒಂದು ಮೈದಾನದಿಂದ ಆಚೆಗೆ ಹೋಗಿತ್ತು. ಈ ಚೆಂಡು ನೇರವಾಗಿ ಹೋಗಿ ಪಾರ್ಕಿಂಗ್ ಏರಿಯಾದಲ್ಲಿ ನಿಂತಿದ್ದ ಕೆವಿನ್ ಒಬ್ರಿಯಾನ್ ಅವರ ಹಿಂಬದಿಯ ಗ್ಲಾಸ್ ಅನ್ನು ಒಡೆದು ಹಾಕಿದೆ.
Didn’t need the air-con on the drive up to you lads. ???? unreal service once again. Never fails to disappoint. I’ll park further away next time ???? #BestInTheBusiness https://t.co/tNKTG0tRLA
— Kevin O'Brien (@KevinOBrien113) August 27, 2020
ಕಾರಿನ ಫೋಟೋವನ್ನು ಟ್ವೀಟ್ ಮಾಡಿರುವ ಐರ್ಲೆಂಡ್ ಕ್ರಿಕೆಟ್ ತಂಡ, ಕೆವಿನ್ ಒಬ್ರಿಯಾನ್ ಅವರು ಸಿಕ್ಸ್ ಹೊಡೆದ ಬಾಲು ಅವರ ಕಾರಿನ ಗ್ಲಾಸ್ ಅನ್ನು ಒಡೆಯಿತು ಎಂದು ಬರೆದುಕೊಂಡಿದೆ. ಇದನ್ನು ರೀಟ್ವೀಟ್ ಮಾಡಿರುವ ಕೆವಿನ್, ಈಗ ನನ್ನ ಕಾರಿಗೆ ಎಸಿಯೇ ಬೇಕಾಗಿಲ್ಲ. ಹಾಗೇ ಡ್ರೈವ್ ಮಾಡಬಹುದು. ನನಗೆ ಇದರಿಂದ ಬೇಜಾರಿಲ್ಲ. ಇನ್ನೊಮ್ಮೆ ಕಾರನ್ನು ಸರಿ ಮಾಡಿಸುತ್ತೇನೆ. ಮುಂದಿನ ದಿನದಲ್ಲಿ ಕಾರನ್ನು ಬೇರೆ ಕಡೆ ಪಾರ್ಕ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕಿವಿನ್ ಒಬ್ರಿಯಾನ್ ಅವರನ್ನು ಭಾರತದ ಕ್ರೀಡಾಭಿಮಾನಿಗಳು ಮರೆಯುವಂತಿಲ್ಲ. ಏಕೆಂದರೆ 2011ರಲ್ಲಿ ನಡೆದ ವಿಶ್ವಕಪ್‍ನಲ್ಲಿ ಕೆವಿನ್ ವೇಗದ ಶತಕ ಸಿಡಿಸಿ ಸುದ್ದಿಯಾಗಿದ್ದರು. ಅಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಐರ್ಲೆಂಡ್‍ಗೆ 327 ರನ್‍ಗಳ ದೊಡ್ಡ ಟಾರ್ಗೆಟ್ ನೀಡಿತ್ತು. ಅಂದು ಐರ್ಲೆಂಡ್ ಗೆಲ್ಲುತ್ತದೆ ಎಂದು ಯಾರೂ ಊಸಿರಲಿಲ್ಲ. ಅಂದಿನ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಕೆವಿನ್ 63 ಎಸೆತಗಳಲ್ಲಿ 113 ರನ್ ಗಳಿಸಿ ತಂಡಕ್ಕೆ 3 ವಿಕೆಟ್‍ಗಳ ಜಯವನ್ನು ತಂದುಕೊಟ್ಟಿದ್ದರು.