ಬೆಂಗಳೂರು: ನಟ ಸೋನು ಸೂದ್ ದೇಶಾದ್ಯಂತ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಈಗ ವಿಶೇಷವಾಗಿ ಬೆಂಗಳೂರು ಜನತೆಯ ಸಹಾಯಕ್ಕೆ ಸೋನು ಸೂದ್ ನಿಂತಿದ್ದಾರೆ. ಬೆಂಗಳೂರಿನ ಸಾಕಷ್ಟು ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಇದೆ. ಅನೇಕರಿಗೆ ಬೆಡ್‍ಗಳು ಕೂಡ ಸಿಗುತ್ತಿಲ್ಲ. ಹೀಗಾಗಿ ಮನೆ ಬಾಗಿಲಿಗೆ ವೈದ್ಯಕೀಯ ಆಮ್ಲಜನಕ ಸಿಲಿಂಡರ್‍ಗಳನ್ನು ಪೂರೈಕೆ ಮಾಡಲು ಸೋನು ಸೂದ್ ನಿರ್ಧರಿಸಿದ್ದಾರೆ.
Keep the hope alive
Bengaluru. We are with you.@SoodFoundation@bikesSwag @Ajaypratap777 @iamRJamit @HothurGivesBack #swagert pic.twitter.com/VkdSbR3AOh
— sonu sood (@SonuSood) May 14, 2021
Advertisement
ಸೋನು ಸೂದ್ ಫೌಂಡೇಷನ್, ಹೋಥೂರ್ ಫೌಂಡೆಷನ್ ಹಾಗೂ ಸ್ವಾಗ್ ಬೈಕ್ಸ್ ಒಟ್ಟಾಗಿ ಸೇರಿ ಈ ಕಾರ್ಯಕ್ಕೆ ಮುಂದಾಗಿದೆ. ಕೊರೊನಾ ರೋಗಿ ಮನೆಯಲ್ಲೇ ಇದ್ದು, ಅವರಿಗೆ ತೀವ್ರವಾಗಿ ಉಸಿರಾಟದ ತೊಂದರೆ ಕಾಡುತ್ತಿದ್ದರೆ ಅವರು ಈ ಫೌಂಡೆಷನ್ ಸಂಪರ್ಕ ಮಾಡಬಹುದು. ಈ ಮೂಲಕ ಮನೆ ಬಾಗಿಲಿಗೆ ಸಿಲಿಂಡರ್ ಪಡೆದುಕೊಳ್ಳಬಹುದು. ಯಾರಿಗೆ ತೊಂದರೆ ಇದೆಯೋ ಅವರು 706999961 ಸಂಖ್ಯೆಗೆ ವಾಟ್ಸ್ಯಾಪ್ ಮಾಡಬೇಕು. ಬೆಂಗಳೂರಿನ ಯಾವ ಲೊಕೇಷನ್ ಎನ್ನುವ ಬಗ್ಗೆ ಮಾಹಿತಿ ನೀಡಬೇಕು. ಅವರು, ನಂತರ ನಿಮ್ಮ ಸಂಪರ್ಕಕ್ಕೆ ಬರುತ್ತಾರೆ. ಭರವಸೆಯಿಂದ ಜೀವಂತವಾಗಿರಿ ಬೆಂಗಳೂರಿಗರೆ. ನಾವು ನಿಮ್ಮೊಂದಿಗಿದ್ದೇವೆ ಎಂದು ಸೋನು ಸೂದ್ ಟ್ವೀಟ್ ಮಾಡಿ ಸಹಾಯವನ್ನು ಮಾಡುವುದಾಗಿ ತಿಳಿಸಿದ್ದಾರೆ.
Advertisement
Stay strong India ????????
Oxygen from my side on your way❤️@SoodFoundation pic.twitter.com/72prrjtw7v
— sonu sood (@SonuSood) May 6, 2021
Advertisement
ಆಕ್ಸಿಜನ್, ಬೆಡ್ ವ್ಯವಸ್ಥೆ ಆಗುತ್ತಿಲ್ಲ. ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಆಕ್ಸಿಜನ್ ಪೂರೈಕೆ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಕಾರ್ಯದಲ್ಲಿ ಸೋನು ಸೂದ್ ಮುಂಚೂಣಿಯಲ್ಲಿದ್ದಾರೆ. ಕೊರೊನಾದಿಂದ ಅತಿ ಹೆಚ್ಚು ಕಷ್ಟ ಅನುಭವಿಸುತ್ತಿರುವ ನಾಲ್ಕು ರಾಜ್ಯಗಳಲ್ಲಿ ಆಕ್ಸಿಜನ್ ಪ್ಲಾಂಟ್‍ಗಳನ್ನು ಸ್ಥಾಪಿಸಲು ಸೋನು ಸೂದ್ ತೀರ್ಮಾನಿಸಿದ್ದರು. ಅದಕ್ಕಾಗಿ ಅವರು ಆಕ್ಸಿಜನ್ ಪ್ಲಾಂಟ್‍ಗಳನ್ನು ಫ್ರಾನ್ಸ್ ನಿಂದ ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ.
Advertisement