ಭಯೋತ್ಪಾದನೆ ತಡೆಗಾಗಿ ಭಾರತವನ್ನ ಹಿಂದೂ ರಾಷ್ಟ್ರ ಅಂತ ಘೋಷಿಸಿ: ಶಾಸಕ ಪಿ.ಸಿ.ಜಾರ್ಜ್

Public TV
1 Min Read
pc george mla kerala 1

ತಿರುವನಂತಪುರ: ದೇಶದಲ್ಲಿ ಭಯೋತ್ಪಾದನೆ ತಡೆಗಾಗಿ ಭಾರತವನ್ನ ಹಿಂದೂ ರಾಷ್ಟ್ರ ಎಂದು ಘೋಷಿಸಿಬೇಕಾಗಿದೆ. ಕೇರಳದಲ್ಲಿ ಎಲ್‍ಡಿಎಫ್ ಮತ್ತು ಯುಡಿಎಫ್ 2030ರೊಳಗೆ ಭಾರತವನ್ನ ಇಸ್ಲಾಮಿಕ್ ಸ್ಟೇಟ್ ಮಾಡಲು ಮುಂದಾಗಿವೆ ಎಂದು ಕೇರಳದ ಜನಪಕ್ಷ (ಸೆಕ್ಯೂಲರ್) ಶಾಸಕ ಪಿ.ಸಿ.ಜಾರ್ಜ್ ಗಂಭೀರ ಆರೋಪ ಮಾಡಿದ್ದಾರೆ.

pc george mla kerala

ಇಡುಕ್ಕಿ ಜಿಲ್ಲೆಯ ಥೋಡುಪುಜಾದಲ್ಲಿ ಆಯೋಜಿಸಲಾಗಿದ್ದ ಬೈಠಕ್ ನಲ್ಲಿ ಶಾಸಕ ಪಿ.ಸಿ.ಜಾರ್ಜ್ ಭಾಗಿಯಾಗಿದ್ದರು. ಲವ್ ಜಿಹಾದ್ ವಿಷಯದ ಕುರಿತು ಮಾತನಾಡುತ್ತಿರುವ ವೇಳೆ ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕಿದೆ. ಎಲ್‍ಡಿಎಫ್ ಮತ್ತು ಯುಡಿಎಫ್ ಭಾರತವನ್ನ ಮುಸ್ಲಿಂ ರಾಷ್ಟ್ರವನ್ನಾಗಿ ಬದಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

pc george mla kerala 2

2016ರಲ್ಲಿ ಮೋದಿ ಸರ್ಕಾರ ನೋಟ್ ಬ್ಯಾನ್ ಮಾಡಿದ್ದರಿಂದ, ಹೊರಗಿನಿಂದ ಬರುತ್ತಿದ್ದ ಹಣ ಸ್ಥಗಿತಗೊಂಡಿದೆ. ಹಾಗಾಗಿ ಅವರ ಕೆಲಸ ನಿಧಾನವಾಗಿದೆ. ಸುಪ್ರೀಂಕೋಟ್ ಮದುವೆಯನ್ನ ಲವ್ ಜಿಹಾದ್ ಅಂತ ಹೇಳಲ್ಲ. ಅದು ಲವ್ ಜಿಹಾದ್ ಅನ್ನೋದು ನನಗೆ ಗೊತ್ತಿದೆ. ಕೇರಳದಲ್ಲಿ ಲವ್ ಜಿಹಾದ್ ತಡೆಯಬೇಕಿದ್ದು, ಅದಕ್ಕಾಗಿ ಮಹಾನ್ ಭಾರತವನ್ನು ಹಿಂದೂ ರಾಷ್ಟ್ರ ಅಂತ ಘೋಷಿಸಿಬೇಕಿದೆ ಎಂದರು.

love jihad

ವಿಶ್ವದ ಶೇ.68ರಷ್ಟು ಹಿಂದೂಗಳು ಭಾರತದಲ್ಲಿದ್ದಾರೆ. ವಿಶ್ವದ ಬಹುತೇಕ ದೇಶಗಳು ಒಂದು ಧರ್ಮದ ಬಗ್ಗೆ ಹೆಚ್ಚು ಒಲವು ಹೊಂದಿರೋದನ್ನ ಗಮನಿಸಬಹುದು. ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳನ್ನು ಮುಸ್ಲಿಂ ರಾಷ್ಟ್ರಗಳನ್ನಾಗಿ ಬದಲಿಸುವ ಪ್ರಯತ್ನಗಳು ಜಾಗತೀಕ ಮಟ್ಟದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

love jihad

ಕೇರಳದ ಕೊಟ್ಟಾಯಂ ಜಿಲ್ಲೆಯ ಪೂಂಜರ್ ಕ್ಷೇತ್ರದ ಶಾಸಕರಾದ ಪಿ.ಸಿ.ಜಾರ್ಜ್ 2016ರ ಚುನಾವಣೆಯಲ್ಲಿ ಯುಡಿಎಫ್ ಮತ್ತು ಎಲ್‍ಡಿಎಫ್ ಅಭ್ಯರ್ಥಿಗಳು ಭಾರೀ ಮತಗಳ ಅಂತರದಲ್ಲಿ ಸೋಲಿಸಿ ಕೇರಳದ ವಿಧಾನಸಭೆ ಪ್ರವೇಶಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಜೊತೆ ತಮ್ಮ ಕೇರಳ ಜನಪಕ್ಷೀಯ ಪಾರ್ಟಿ ಮೈತ್ರಿ ಮಾಡಿಕೊಂಡಿದ್ದರು. ನಂತರ ತಾವೇ ಮೈತ್ರಿಯಿಂದ ಹೊರ ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *