ಶ್ರೀನಗರ: ಭಯೋತ್ಪಾದಕರ ಅಟ್ಟಹಾಸಕ್ಕೆ ಇಬ್ಬರು ಸಾವನ್ನಪ್ಪಿರುವ ಘಟನೆ ಸೋಮವಾರ ಜಮ್ಮು ಹಾಗೂ ಕಾಶ್ಮೀರದ ಸೊಪೋರ್‍ನಲ್ಲಿ ನಡೆದಿದೆ. ಸದ್ಯ ಘಟನೆ ಕುರಿತಂತೆ ಪ್ರದೇಶದ ಸುತ್ತಮುತ್ತಲು ಶೋಧಕಾರ್ಯ ಆರಂಭಿಸಲಾಗಿದೆ.
ಘಟನೆ ವೇಳೆ ಜಮ್ಮು ಹಾಗೂ ಕಾಶ್ಮೀರದ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರೊಬ್ಬರು ಮೃತಪಟ್ಟಿರುವುದಾಗಿ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
Advertisement
#Terrorists fired at Municipal Office #Sopore. In this #terror incident, police personnel Shafqat Ahmad & councillor Riyaz Ahmad got #martyred & councillor Shams-ud-din Peer got injured. Injured shifted to hospital for treatment. Area cordoned off & further details shall follow.
— Kashmir Zone Police (@KashmirPolice) March 29, 2021
Advertisement
ಬಿ ಡಿ ಸಿ ಅಧ್ಯಕ್ಷೆ ಮತ್ತು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಫರೀದಾ ಖಾನ್ ನೇತೃತ್ವದಲ್ಲಿ ನಡೆದ ಮುನ್ಸಿಪಲ್ ಕೌನ್ಸಿಲ್ ಸಭೆ ವೇಳೆ ಭಯೋತ್ಪಾದಕರು ಹೊರಗಿನಿಂದ ದಾಳಿ ನಡೆಸಿದ್ದರು. ಲಂಗೇಟ್ ಹಂದ್ವರದ ಬಿಡಿಸಿ ಅಧ್ಯಕ್ಷೆ ಫರೀದಾ ಖಾನ್ ದಕ್ ಬಂಗಲೆಯಲ್ಲಿ ಸಭೆ ನಡೆಸುತ್ತಿದ್ದ ವೇಳೆ ಉಗ್ರರು ಅವರ ಮೇಲೆ ಗುಂಡು ಹಾರಿಸಿರುವುದಾಗಿ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.