– ಭದ್ರಾ ಅಭಯಾರಣ್ಯದಲ್ಲಿ ಇಂದು ಸಫಾರಿ
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯಕ್ಕೆ ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಕ್ರವಾರ ಸಂಜೆ ಭೇಟಿ ನೀಡಿ ಜಲಾಶಯ ವೀಕ್ಷಣೆ ಮಾಡಿದ್ದಾರೆ.
ನಂತರ ಬಿಆರ್ ಪಿಯ ಜಂಗಲ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ದರ್ಶನ್, ಎರಡು ದಿನ ಜಂಗಲ್ ರೆಸಾರ್ಟ್‍ನಲ್ಲಿ ಉಳಿಯಲಿದ್ದಾರೆ. ಇಂದು ಭದ್ರಾ ಅಭಯಾರಣ್ಯದಲ್ಲಿ ಸಫಾರಿ ನಡೆಸಿ ಫೋಟೋಗ್ರಫಿ ಮಾಡಲಿದ್ದಾರೆ.
ಹಾಸ್ಯನಟ ಚಿಕ್ಕಣ್ಣ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಸ್ನೇಹಿತರೊಂದಿಗೆ ದರ್ಶನ್ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯ ವೀಕ್ಷಣೆ ಮಾಡಿದರು. ಇಂದು ಅಭಯಾರಣ್ಯದಲ್ಲಿ ಸಫಾರಿ ನಡೆಸಲಿದ್ದಾರೆ.