ನವದೆಹಲಿ: ಕೊರೊನಾ ಬಳಿಕ ಬ್ಲ್ಯಾಕ್ ಫಂಗಸ್ ಬಂತು. ಈಗ ವೈಟ್ ಫಂಗಸ್ ಬರತೊಡಗಿದೆ. ಬಿಹಾರದಲ್ಲಿ 4 ಮಂದಿಯಲ್ಲಿ ವೈಟ್ ಫಂಗಸ್ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ.
ಈಗಾಗಲೇ ಬಿಹಾರದ ಪಾಟ್ನಾದಲ್ಲಿ 4 ಮಂದಿಯಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ. ಆರೋಗ್ಯ ತಜ್ಞರ ಪ್ರಕಾರ ಬ್ಲ್ಯಾಕ್ ಫಂಗಸ್‍ಗಿಂತ ವೈಟ್ ಫಂಗಸ್ ಬಹಳ ಅಪಾಯಕಾರಿಯಾಗಿದ್ದು ಇದು ಶ್ವಾಸಕೋಶ ಅಲ್ಲದೇ ದೇಹದ ಉಗುರು, ಚರ್ಮ, ಹೊಟ್ಟೆ, ಕಿಡ್ನಿ, ಬಾಯಿಗೂ ಹಾನಿ ಮಾಡುತ್ತದೆ.
Advertisement
Advertisement
ವೈಟ್ ಫಂಗಸ್‍ಗೆ ಆಂಟಿ-ಫಂಗಲ್ ಇಂಟ್ರಾವೆನಸ್ ಇಂಜೆಕ್ಷನ್ ನೀಡಲಾಗುತ್ತದೆ. ಒಂದು ಡೋಸ್ 3,500 ರೂ. ದರವಿದ್ದು ಎಂಟು ವಾರಗಳವರೆಗೆ ನೀಡಬೇಕಾಗುತ್ತದೆ. ಇದು ರೋಗದ ವಿರುದ್ಧ ಪರಿಣಾಮಕಾರಿಯಾದ ಏಕೈಕ ಔಷಧವಾಗಿದೆ.
Advertisement
ವೈಟ್ ಫಂಗಸ್ ಶ್ವಾಸಕೋಶಕ್ಕೂ ಸೋಂಕು ತರುತ್ತದೆ ಮತ್ತು ಸೋಂಕಿತ ರೋಗಿಯ ಮೇಲೆ ಎಚ್‍ಆರ್ ಸಿಟಿ ಸ್ಕ್ಯಾನ್ ನಡೆಸಿದಾಗ ಕೋವಿಡ್-19 ಗೆ ಹೋಲುವ ಸೋಂಕು ಪತ್ತೆಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.