– ಕುಟುಂಬಸ್ಥರ ಅನುಮತಿ ಪಡೆದು ಆಪರೇಷನ್
ಕಲಬುರಗಿ: ಕೊರೊನಾದಿಂದ ತತ್ತರಿಸಿದ ಕಲಬುರಗಿಯಲ್ಲಿ ಇದೀಗ ಬ್ಲ್ಯಾಕ್ ಫಂಗಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಬ್ಲ್ಯಾಕ್ ಫಂಗಸ್‍ಗೇ ಗುರಿಯಾಗಿದ ವ್ಯಕ್ತಿಯೊಬ್ಬರ ಬಲಗಣ್ಣು ತೆಗೆದು ವೈದ್ಯರು ಅವರ ಜೀವ ಉಳಿಸಿದ್ದಾರೆ.
ಕಲಬುರಗಿಯ ನಿವಾಸಿಯಾದ ಅನಿಲ್ ಕುಮಾರ್ ಅವರಿಗೆ 8 ದಿನಗಳ ಹಿಂದೆ ಬಲಗಣ್ಣಿನ ಬಳಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಆದಾದ ಬಳಿಕ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ಅವರ ಸಂಬಂಧಿಕರು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ನಂತರ ಆತನ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಔಷಧಿ ಮೂಲಕ ಬ್ಲ್ಯಾಕ್ ಫಂಗಸ್ ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಸಿದ್ದಾರೆ. ಆದರೆ ಎಷ್ಟೇ ಔಷಧಿ ಇಂಜಕ್ಷನ್ ನೀಡಿದರೂ, ಬ್ಲ್ಯಾಕ್ ಫಂಗಸ್ ಮಾತ್ರ ಕಡಿಮೆಯಾಗಲಿಲ್ಲ.
ಯಾವ ಔಷಧಿ ನೀಡಿದರೂ ಅನಿಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದಾಗ, ಕುಟುಂಬಸ್ಥರ ಜೊತೆ ಚರ್ಚಿಸಿ ಬ್ಲ್ಯಾಕ್ ಫಂಗಸ್ ಆಗಿರುವ ಬಲಗಣ್ಣು ತೆಗೆದರೆ ಮಾತ್ರ ಇವರು ಉಳಿಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಮೆದುಳಿಗೂ ಸಹ ಇದು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಹೀಗಾಗಿ ಕುಟುಂಬಸ್ಥರ ಅನುಮತಿ ಪಡೆದು ಬ್ಲ್ಯಾಕ್‍ಫಂಗಸ್ ಆದ ಬಲಗಣ್ಣನ್ನು ಆಪರೇಷನ್ ಮಾಡಿ ವೈದ್ಯರು ತೆಗೆದಿದ್ದಾರೆ. ಇದೀಗ ಅನಿಲ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.