ಚಿತ್ರದುರ್ಗ: ಬ್ಲಾಕ್‍ಮೇಲ್ ಹಾಗೂ ಕೆಲ ಶಾಸಕರೊಂದಿಗೆ ಟೀಪಾರ್ಟಿ ಮಾಡಿದವರೆಲ್ಲಾ ಮಂತ್ರಿ ಆಗುತ್ತಾರೆಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
ಚಿತ್ರದುರ್ಗದಲ್ಲಿ ಮಾತನಾಡಿದ ಗೂಳಿಹಟ್ಟಿ ಶೇಖರ್ ಅವರು, 2008ರಲ್ಲಿ ಪಕ್ಷೇತರನಾಗಿ ಗೆದ್ದು ಬಿಜೆಪಿ ಸರ್ಕಾರ ರಚನೆಗೆ ನಾನು ಮೊದಲು ಬೆಂಬಲ ನೀಡಿದ್ದೇನೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಕಳೆದ ಬಿಜೆಪಿ ಸರ್ಕಾರದ ವೇಳೆ ನನಗೆ ಅನ್ಯಾಯ ತೀವ್ರ ಆಗಿತ್ತು. ಕೇವಲ ಜವಳಿ ಮತ್ತು ಕ್ರೀಡಾ ಇಲಾಖೆ ನೀಡಿದ್ದ ಸಿಎಂ ಯಡಿಯೂರಪ್ಪ ಕಡಿಮೆ ಅವಧಿಯಲ್ಲಿ ನನ್ನ ಸ್ಥಾನವನ್ನು ವಾಪಸ್ ಪಡೆದಿದ್ದರು. ಆದರೆ ಆಪರೇಷನ್ ಕಮಲದಿಂದ ಬಂದವರಿಗೆ ಪ್ರಮುಖ ಖಾತೆ ನೀಡಿ ರಾಜಾತಿಥ್ಯ ನೀಡಿದ್ದರು ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ದಕ್ಷಿಣ ಕನ್ನಡ ಸೇರಿದಂತೆ ಹೈ ರಿಸ್ಕ್ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ
Advertisement
Advertisement
ಈ ಬಾರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನನಗೂ ಮಂತ್ರಿ ಸ್ಥಾನ ನೀಡುವ ನಿರೀಕ್ಷೆಯಿದೆ. ಆದರೆ ನಮಗೆ ಬಿಜೆಪಿಯಲ್ಲಿ ಯಾರು ಸಹ ಗಾಡ್ ಫಾದರ್‍ಗಳು ಇಲ್ಲ ಹೀಗಾಗಿ ಯಾರ ಮನೆಯ ಕದವನ್ನು ತಟ್ಟಿ ಲಾಭಿ ನಡೆಸಿಲ್ಲ. ಕೇಂದ್ರ ಸರ್ಕಾರದ ಸಂಪುಟ ಮಾದರಿಯಲ್ಲಿ ಸರ್ವೆ ಮಾಡಿ ಸಂಪುಟ ರಚನೆಯಾದರೆ ನನಗೂ ಅವಕಾಶದ ನಿರೀಕ್ಷೆ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
Advertisement