ಬ್ಲಡ್ ಬ್ಯಾಂಕ್ ತೆರೆಯಲಿದ್ದಾರೆ ರಿಯಲ್ ಹೀರೋ

Public TV
1 Min Read
SONU SOOD

ಮುಂಬೈ: ಕೊರೊನಾ ಕಾಲ್‍ಡೌನ್ ಸಮಯದಲ್ಲಿ ಸಮಾಜಮುಖಿ ಕಾರ್ಯಗಳಿಂದ ಸುದ್ದಿಯಾಗಿದ್ದ ಸೋನು ಸೂದ್ ಇದೀಗ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ.

sonu sood 1 medium

ಸೋನು ಸೂದ್ ಬೃಹತ್ ಬ್ಲಡ್ ಬ್ಯಾಂಕ್ ತೆರೆಯುತ್ತಿದ್ದಾರೆ. ಜೀವಗಳನ್ನು ಉಳಿಸೋಣ, ನಮ್ಮ ಸ್ವಂತ ಬ್ಲಡ್ ಬ್ಯಾಂಕ್ ಶೀಘ್ರದಲ್ಲೇ ಬರಲಿದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಸಿದ್ದಾರೆ.

SONU SOOD 3

ದೇಶದ ಅತಿದೊಡ್ಡ ಬ್ಲಡ್ ಬ್ಯಾಂಕ್ ಎಂದು ಗುರುತಿಸಲ್ಟಟ್ಟಿರುವ ‘ಸೋನು ಫಾರ್ ಯು’ ಅಪರೂಪದ ರಕ್ತ ಗುಂಪುಗಳನ್ನು ಹೊಂದಿರುವ ರೋಗಿಗಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಈ ಬಗ್ಗೆ ಮಾತನಾಡಿದ ಸೋನುಸೂದ್, ‘ಸೋನು ಫಾರ್ ಯು’ ನನ್ನ ಮತ್ತು ನನ್ನ ಸ್ನೇಹಿತ ಜಾನ್ಸನ್ ಅವರ ನೇತೃತ್ವದಲ್ಲಿ ಮೂಡಿ ಬರಲಿರುವ ಯೋಜನೆ. ಪ್ರತಿ ಬಾರಿಯೂ ಯಾರಿಗಾದರೂ ತುರ್ತಾಗಿ ರಕ್ತ ಬೇಕಾಗುತ್ತದೆ ಮತ್ತು ನಾವು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತೇವೆ. ಆಗ ಅನೇಕರು ಪ್ರತಿಕ್ರಿಯೆ ನೀಡುತ್ತಾರೆ. ಆದ್ದರಿಂದ ಈ ಉದ್ದೇಶವನ್ನು ಪೂರೈಸುವ ಆ್ಯಪ್ ಏಕೆ ರಚಿಸಬಾರದು ಎಂದು ಯೋಚಿಸಿದೆವು. ಭಾರತದಲ್ಲಿ 12,000 ರೋಗಿಗಳು ರಕ್ತದಾನದ ಕೊರತೆಯಿಂದ ಸಾಯುತ್ತಾರೆ. ಈ ಆ್ಯಪ್ ಮೂಲಕ 20 ನಿಮಿಷಗಳಲ್ಲಿ ಒಬ್ಬರ ಜೀವವನ್ನು ಉಳಿಸಬಹುದು. ಹೀಗಾಗಿ ನಾವು ಯೋಜನೆಗೆ ಮುಂದಾಗಿದ್ದೇವೆ ಎಂದಿದ್ದಾರೆ.

ರಕ್ತದ ಅಗ್ಯವಿರುವವರಿಗೆ ಸರಿಯಾದ ಸಮಯಕ್ಕೆ ನೆರವಾಗುವುದು ಈ ಆ್ಯಪ್‍ನ ಉದ್ದೇಶವಾಗಿದೆ. ಅಲ್ಲದೇ ರಕ್ತ ಬೇಕಾಗಿರುವವರು ನೇರವಾಗಿ ರಕ್ತದಾನಿಗಳನ್ನು ಸಂಪರ್ಕಕಿಸಬಹುದಾಗಿದೆ. ರಕ್ತದಾನಿಯೊಬ್ಬರು ತುರ್ತು ಅವಶ್ಯಕತೆ ಇರುವ ಸಂದರ್ಭಗಳಲ್ಲಿ ಸಮೀಪದ ದಾನಿಗಳು ತಕ್ಷಣ ಆಸ್ಪತ್ರೆಗೆ ಹೋಗಿ ರಕ್ತದಾನ ಮಾಡಬಹುದಾಗಿದೆ.

Share This Article