ರಷ್ಯಾ: ಒಬ್ಬರಿಗೊಬ್ಬರು ಕೋಳ ತೊಡಿಸಿಕೊಂಡ ಪೋಟೋಗಳ ಮೂಲಕ ಪ್ರೇಮಿಗಳಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.
ಅಲೆಕ್ಸಾಂಡರ್ ಕುಡ್ಲೇ(33) ವಿಕ್ಟೋರಿಯಾ ಪುಸ್ತೋವಿಟೋವಾ(28) ಕೋಳ ತೊಡಸಿಕೊಂಡು ಸುದ್ದಿಯಾದ ಈ ಜೋಡಿ ಉಕ್ರೇನ್ ನಿವಾಸಿಗಳಾಗಿದ್ದಾರೆ. ಕಾರ್ ಸೇಲ್ಸ್ಮನ್, ಬ್ಯೂಟಿಷಿಯನ್ ಆಗಿ ಇಬ್ಬರು ಕೆಲಸ ಮಾಡುತ್ತಾರೆ.
ಇಬ್ಬರು ಪ್ರೇಮಿಗಳು ಒಬ್ಬರಿಗೊಬ್ಬರು ಹೆಚ್ಚು ಪ್ರೀತಿಸುತ್ತಾರೆ. ಆದರೆ ಆಗಾಗ ಇವರ ಮಧ್ಯೆ ಜಗಳವು ಆಗುತ್ತಿತ್ತು. ಬ್ರೇಕಪ್ ಮಾಡಿಕೊಳ್ಳೋಣ ಎನ್ನುವ ಮಾತುಗಳು ಇಬ್ಬರ ನಡುವೆ ಬರುತ್ತಿದ್ದವಂತೆ. ಆಗ ಇಬ್ಬರು ಸೇರಿ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
Ukrainian couple Alexandr Kudlay and Viktoria Pustovitova, handcuffed themselves together to mend their on-off relationship https://t.co/AFa27jNTDh pic.twitter.com/T1rObdwzTU
— Reuters (@Reuters) March 12, 2021
ಒಬ್ಬರಿಗೊಬ್ಬರು ಮೂರು ತಿಂಗಳ ಕಾಲ ಕೋಳ ಧರಿಸಿಕೊಂಡು ಜೊತೆಯಲ್ಲೇ 24/7 ಕಾಲ ಕಳೆಯೋಣ ಎಂದು ಇಬ್ಬರು ಮಾತನಾಡಿಕೊಂಡು ಈ ಒಂದು ಪರೀಕ್ಷೆಗೆ ಮುಂದಾಗಿದ್ದಾರೆ. ಜೋಡಿಯ ನೂತನ ಎಕ್ಸ್ ಪರಿಮೆಂಟ್ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದರು. ಈ ವಿಚಾರ ಸೊಶೀಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.
ಮೊದಲು ಇಬ್ಬರು ತುಂಬಾ ಜಗಳ ಮಾಡಿಕೊಳ್ಳುತ್ತಿದ್ದೆವು. ಹೀಗಾಗಿ ಈ ಒಂದು ಯೋಚನೆ ಬಂತು. ನಾನು ಮೊದಲು ಇದಕ್ಕೆ ಒಪ್ಪಲಿಲ್ಲ. ಕೋಳ ಧರಿಸಿಕೊಂಡ ನಂತರ ಇಬ್ಬರು ಜೊತೆಯಾಗಿ ಓಡಾಡಿ ಹೊಂದಿಕೊಂಡಿದ್ದೇವೆ. ಸದಾ ಜೊತೆಯಲ್ಲಿಯೇ ಇರುವುದರಿಂದ ಅರ್ಥ ಮಾಡಿಕೊಳ್ಳಲು ಸಮಯ ಸಿಕ್ಕಂತಾಯಿತ್ತು. ಇಬ್ಬರು ಅನ್ಯೋನ್ಯವಾಗಿದ್ದೇವೆ ಎಂದು ಈ ಜೋಡಿ ಹೇಳಿಕೊಂಡಿದೆ.