ಲಂಡನ್: ಬ್ರಿಟಿಷ್ ರಾಯಲ್ ಫ್ಯಾಮಿಲಿ ಮನೆ ಕೆಲಸದವರಿಗಾಗಿ ಹುಡುಕಾಟ ನಡೆಸುತ್ತಿದ್ದು, ಬರೋಬ್ಬರಿ 18.5 ಲಕ್ಷ ರೂ. ಆರಂಭಿಕ ಸಂಬಳ ನೀಡುವುದಾಗಿ ಘೋಷಿಸಿದೆ.
ರಾಜ ಮನೆತನದ ಅಧಿಕೃತ ವೆಬ್‍ಸೈಟ್ ರಾಯಲ್ ಹೌಸ್‍ಹೋಲ್ಡ್‍ನಲ್ಲಿ ಈ ಕುರಿತು ಪ್ರಕಟಿಸಿದ್ದು, ಇದು 2ನೇ ಹಂತದ ಅಪ್ರಂಟಿಸ್‍ಶಿಪ್(ತರಬೇತಿ ಅವಧಿ) ಕೆಲಸವಾಗಿದೆ. ಆಯ್ದ ಅಭ್ಯರ್ಥಿಗಳು ಮಾತ್ರ ವಿಂಡ್ಸರ್ ಕ್ಯಾಸ್ಟಲ್‍ನಲ್ಲಿ ವಾಸಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ.
Advertisement
Advertisement
ಈಗಾಗಲೇ ಹೇಳಿದ ಹಾಗೆ ಇದೊಂದು ಎರಡನೇ ಹಂತದ ಅಪ್ರೆಂಟಿಸ್‍ಶಿಪ್ ಕೆಲಸವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಇಂಗ್ಲೆಂಡ್‍ನ ವಿಂಡ್ಸರ್ ಕ್ಯಾಸ್ಟಲ್‍ನಲ್ಲಿ ಇರಬೇಕು. ವಾರದಲ್ಲಿ ಐದು ದಿನ ಕೆಲಸ ಮಾಡಬೇಕು.
Advertisement
ಸಂಬಳ ಎಷ್ಟು?
ರಾಯಲ್ ಫ್ಯಾಮಿಲಿಗೆ ತಕ್ಕಂತೆ ಆಕರ್ಷಕ ಸಂಬಳವನ್ನೇ ನೀಡಲಾಗುತ್ತಿದೆ. ಈ ಅಪ್ರೆಂಟಿಸ್‍ಶಿಪ್ ಕೆಲಸದ ವೇಳೆ 19,140 ಬ್ರಿಟಿಷ್ ಪೌಂಡ್ (18.5 ಲಕ್ಷ ರೂ.) ಆರಂಭಿಕ ಸಂಬಳ ನೀಡಲಾಗುತ್ತದೆ. ಇದರ ಜೊತೆಗೆ ಇರಲು ವ್ಯವಸ್ಥೆ ಹಾಗೂ ಅರಮನೆಯಿಂದ ಊಟವನ್ನು ಸಹ ನೀಡಲಾಗುತ್ತದೆ. ಆದರೆ ಸಂಬಳದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಇದರಲ್ಲೇ ಪ್ರಯಾಣ ವೆಚ್ಚ ಸಹ ಸೇರಿದೆ.
Advertisement
ಅರ್ಹತೆ ಏನು?
ಆಯ್ಕೆಯಾದ ಅಭ್ಯರ್ಥಿಯನ್ನು ವರ್ಷ ಪೂರ್ತಿ ರಾಯಲ್ಸ್‍ನ ಇತರ ಅರಮನೆಗಳಿಗೆ ಕೆಲಸಕ್ಕಾಗಿ ಸ್ಥಳಾಂತರಿಸಲಾಗುತ್ತದೆ. ಇದರಲ್ಲಿ ಬಕ್ಕಿಂಗ್ಹ್ಯಾಮ್ ಅರಮನೆ ಸಹ ಸೇರಿದೆ. ಈ ಸಮಗ್ರ ಲಾಭಗಳ ಪ್ಯಾಕೇಜ್‍ನಲ್ಲಿ ಬ್ಯಾಂಕ್ ರಜೆ ಸೇರಿ 33 ದಿನಗಳ ರಜೆ ಸಹ ಇದೆ. ಆದರೆ ಅಭ್ಯರ್ಥಿಗಳು ಕೆಲಸ ಪಡೆಯಲು ಇಂಗ್ಲಿಷ್ ಹಾಗೂ ಗಣಿತದಲ್ಲಿ ಪರಿಣಿತಿ ಹೊಂದಿರಬೇಕು. ನೀವು ಅಗತ್ಯ ಅರ್ಹತೆಗಳನ್ನು ಹೊಂದಿಲ್ಲವಾದಲ್ಲಿ ನಿಮ್ಮ ಕಲಿಕೆ ವೃತ್ತಿಯ ಭಾಗವಾಗಿ ಅರ್ಹತೆಗಳನ್ನು ಪಡೆಯಲು ನಿಮಗೆ ಬೆಂಬಲ ನೀಡುತ್ತೇವೆ ಎಂದು ಪೋಸ್ಟ್‍ನಲ್ಲಿ ಉಲ್ಲೇಖಿಸಲಾಗಿದೆ.
ಏನು ಕೆಲಸ?
ಕೆಲಸದ ಅಗತ್ಯತೆಗಳನ್ನು ಸಹ ವಿವರಿಸಲಾಗಿದ್ದು, ನೀವು ನಮ್ಮ ಮನೆ ಕೆಲಸದ ವೃತ್ತಿಪರರ ತಂಡವನ್ನು ಸೇರುತ್ತೀರಿ. ಒಳಾಂಗಣ ಮತ್ತು ವಸ್ತುಗಳನ್ನು ನೋಡಿಕೊಳ್ಳಲು, ಸ್ವಚ್ಛವಾಗಿಟ್ಟುಕೊಳ್ಳಲು ಹಾಗೂ ಕಾಳಜಿ ವಹಿಸಲು ನೀವು ಅವರೊಂದಿಗೆ ಕೆಲಸ ಮಾಡುವಾಗ ಕಲಿಯುತ್ತೀರಿ. ಇದನ್ನು ಅವರು ಚೆನ್ನಾಗಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಕೆಲಸದ ತರಬೇತಿ ಸಮಯ 13 ತಿಂಗಳಾಗಿದ್ದು, ಅಭ್ಯರ್ಥಿಗಳು ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದಲ್ಲಿ ಆ ವ್ಯಕ್ತಿಯನ್ನು ರಾಯಲ್ ಫ್ಯಾಮಿಲಿಯ ಶಾಶ್ವತ ಕೆಲಸಗಾರನನ್ನಾಗಿ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದೆ.