– ಯುಕೆಯಿಂದ ಬಂದ 289 ಜನಕ್ಕೂ ಪರೀಕ್ಷೆ
ಬೆಂಗಳೂರು: ಬ್ರಿಟನ್ ನಿಂದ ಬೆಂಗಳೂರಿಗೆ ಬಂದಿಳಿದ ನಾಲ್ವರು ಪ್ರಯಾಣಿಕರಿಗೆ ಕೊರೊನ ಶಂಕೆ ವ್ಯಕ್ತವಾಗಿದೆ. ಹಾಗಾಗಿ ನಾಲ್ವರನ್ನ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದೆ.
ಕೊರೊನಾ ರೂಪಾಂತರ ವೈರಸ್ ಭೀತಿ ಹಿನ್ನೆಲೆ ಯುಕೆಯಿಂದ ಆಗಮಿಸುವ ವಿಮಾನಗಳನ್ನ ಹಲವು ದಿನಗಳಿಂದ ತಡೆ ಹಿಡಿಯಲಾಗಿತ್ತು. ಇಂದಿನಿಂದ ಯುಕೆ ವಿಮಾನಗಳ ಮರು ಆಗಮನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಲಂಡನ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಮೊದಲ ವಿಮಾನ ಆಗಮನವಾಯಿತು. ಲಂಡನ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂಜಾನೆ 4.30 ಗಂಟೆಗೆ ಸುಮಾರು 289 ಪ್ರಯಾಣಿಕರು ಕೆಐಎಬಿ ಗೆ ಬಂದಿಳಿದ್ರು.
Advertisement
Advertisement
ಇನ್ನೂ ಲಂಡನ್ ನಿಂದ ಬಂದ ಪ್ರತಿಯೊಬ್ಬ ಪ್ರಯಾಣಿಕರಿಗೂ ಟರ್ಮಿನಲ್ ನಲ್ಲೆ ಆರ್-ಟಿ-ಪಿಸಿಆರ್ ಟೆಸ್ಟ್ ಮಾಡಿ ರಿಸಲ್ಟ್ ಬರುವವರೆಗೂ ವೈಟಿಂಗ್ ಲೌಂಜ್ ನಲ್ಲಿ ಎಲ್ಲಾ ಪ್ರಯಾಣಿಕರನ್ನ ಇರಿಸಲಾಗಿತ್ತು. ಬೆಳಗ್ಗೆ 4.30 ಕ್ಕೆ ಬಂದ ಯುಕೆ ಪ್ರಯಾಣಿಕರು ಸುಮಾರು ಐದೂವರೆ ಗಂಟೆಗಳ ಕಾಲ ಟೆಸ್ಟ್ ವರದಿ ಬರುವವರೆಗೂ ಯಾರನ್ನು ಹೊರಗಡೆ ಬಿಡದೆ ತಡೆಯಲಾಗಿತ್ತು. ಹೀಗಾಗಿ ಟೆಸ್ಟ್ ವರದಿ ರಿಪೋರ್ಟ್ ವರದಿ ಬರೋದು ತಡವಾಗಿದ್ದರಿಂದ ಒಳಗಡೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಇಂದು ಮೊದಲ ವಿಮಾನ ಯುಕೆಯಿಂದ ಆಗಮಿಸಿದ್ದು ಅದರಲ್ಲಿ 145 ಜನ ಪುರುಷರು, 96 ಜನ ಮಹಿಳೆಯರು, 32 ಮಕ್ಕಳು ಹಾಗೂ 16 ಜನ ವಿಮಾನ ಸಿಬ್ಬಂದಿ ಸೇರಿದಂತೆ 289 ಮಂದಿ ಕೆಐಎಬಿ ಗೆ ಆಗಮಿಸಿದ್ದಾರೆ. ಅದರಲ್ಲಿ ಎಲ್ಲಾ ಪ್ರಯಾಣಿಕರು ಯುಕೆಯಿಂದಲೇ ಕೊರೊನಾ ಟೆಸ್ಟ್ ರಿಪೋರ್ಟ್ ತಂದಿದ್ದರು ಸಹ ಇಲ್ಲಿ ಕೂಡ ಮತ್ತೊಮ್ಮೆ ಟೆಸ್ಟ್ ಗೆ ಒಳಪಡಿಸಲಾಯಿತು. ಇನ್ನೂ ಕೊರೊನಾ ಟೆಸ್ಟ್‍ನಲ್ಲಿ ನಾಲ್ವರಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ಕೊರಾನಾ ಶಂಕೆ ವ್ಯಕ್ತವಾಗಿದೆ. ಇನ್ನುಳಿದ ಎಲ್ಲಾ ಪ್ರಯಾಣಿಕರ ಕೊರೊನಾ ಟೆಸ್ಟ್ ನೆಗಟಿವ್ ಬಂದಿದೆ. ಹೀಗಾಗಿ ನೆಗಟಿವ್ ಬಂದ ಪ್ರಯಾಣಿಕರ ಕೈಗೆ ಸ್ಟ್ಯಾಂಪಿಂಗ್ ಹಾಕಿರುವ ಆರೋಗ್ಯಾಧಿಕಾರಿಗಳು 14 ದಿನ ಸೆಲ್ಫ್ ಹೋಂ ಕ್ವಾರಂಟೈನ್ ಆಗುವಂತೆ ಸೂಚಿಸಿ ಕಳುಹಿಸಿದ್ದಾರೆ.
ಶಂಕಿತ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು ನಾಲ್ವರನ್ನ ಮತ್ತೊಮ್ಮೆ ಟೆಸ್ಟ್ ಮಾಡಿಸಲು ಮುಂದಾಗಿದೆ. ಒಟ್ಟಾರೆ ಕೊರೊನಾ ರೂಪಾಂತರ ವೈರಸ್ ಭೀತಿಯಿಂದ ಯುಕೆಯಿಂದ ತಡೆ ಹಿಡಿಯಲಾಗಿದ್ದ ವಿಮಾನಗಳ ಹಾರಾಟ ಇಂದಿನಿಂದ ಮರು ಆರಂಭವಾಗಿದ್ದು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಟೆಸ್ಟಿಂಗ್ ನಲ್ಲಿ ಪಾಸಿಟಿವ್ ಬಂದ ಪ್ರಯಾಣಿಕರನ್ನ ಆಸ್ಪತ್ರೆಗಳಿಗೆ ರವಾನಿಸಿದ್ರೆ, ನೆಗೆಟಿವ್ ಬಂದ ಪ್ರಯಾಣಿಕರು ಕೈಗೆ ಸ್ಟಾಂಪಿಂಗ್ ಮಾಡಿ ಸೆಲ್ಪ್ ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗುತ್ತಿದೆ.