– 26 ಮಂದಿಗೆ ಕೊರೊನಾ ದೃಢ
ಬೆಂಗಳೂರು: ಬ್ರಿಟನ್‍ನಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿದ್ದು, ಬ್ರಿಟಿನ್‍ನಿಂದ ಬಂದವರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್‍ರವರು ಪ್ರತಿಕ್ರಿಯಿಸಿದ್ದಾರೆ.
Advertisement
ಯುಕೆಯಿಂದ ಬಂದ ಎಷ್ಟೋ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಕೆಲವರು ಮಿಸ್ ಆಗಿದ್ದಾರೆ. ಹಾಗಾಗಿ ಯುಕೆಯಿಂದ ಬಂದವರಲ್ಲಿ ಮನವಿ ಮಾಡುತ್ತೇನೆ. ಸರ್ಕಾರದ ಜೊತೆ ಸಹಕರಿಸಿ ಬ್ರಿಟನ್‍ನಿಂದ ಬಂದವರು ತಾವಾಗಿಯೇ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಿ. ಬದಲಾಗಿ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುವುದು ಅಪರಾಧವಾಗಿದೆ. ಇನ್ನೂ ಫೋನ್ ಟ್ರೇಸ್ ಆಗದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
Advertisement
Advertisement
ಬ್ರಿಟನ್‍ನಿಂದ ಬಂದವರಲ್ಲಿ ಇದುವರೆಗೆ 26 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಎಲ್ಲರಲ್ಲಿಯೂ ಕೊರೊನಾ ರೋಗದ ಗುಣಲಕ್ಷಣ ಕಂಡುಬಂದಿದೆ. ಅವರನ್ನು ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಬ್ರಿಟನ್ ಹೊಸ ಕೊರೊನಾ ತಳಿ ಟೆಸ್ಟ್ ವರದಿಯನ್ನು ದೆಹಲಿಗೆ ಕಳುಹಿಸಿಕೊಡಲು 48 ಗಂಟೆಗಳು ಬೇಕಾಗುತ್ತದೆ. ಇದು ಸೂಕ್ಷ್ಮ ವಿಚಾರವಾಗಿದ್ದು, ಐಸಿಎಂಆರ್‍ರವರು ಟೆಸ್ಟ್ ವರದಿಯನ್ನು ಪ್ರಕಟಿಸುತ್ತಾರೆ. ನಾನು ಕೂಡ ಐಸಿಎಂಆರ್‍ರೊಂದಿಗೆ ಮಾತನಾಡುತ್ತೇನೆ. ಎಂದು ಹೇಳಿದ್ದಾರೆ.