ಚಿಕ್ಕಮಗಳೂರು: ರೂಪಾಂತರಗೊಂಡಿರುವ ಕೊರೊನಾ ವೈರಸ್ ಬಗ್ಗೆ ಈಗಾಗಲೇ ಜಗತ್ತೇ ಆತಂಕಕ್ಕೀಡಾಗಿದೆ. ಈ ಮಧ್ಯೆ ಬ್ರಿಟನ್ನಿಂದ ಜಿಲ್ಲೆಗೆ ಬಂದ 18 ಜನರಲ್ಲಿ ಇಬ್ಬರಿಗೆ ಕೊರೊನಾ ಇರೋದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ಪಷ್ಟಪಡಿಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 20ರಂದು ಚಿಕ್ಕಮಗಳೂರು ತಾಲೂಕಿಗೆ ಬ್ರಿಟನ್‍ನಿಂದ ಒಬ್ಬರು ಬಂದಿದ್ದರು. ಅವರು ಬಂದ ವಿಷಯ ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣದಿಂದ ತಿಳಿದ ಕೂಡಲೇ ಅವರ ಬಗ್ಗೆ ನಿಗಾ ವಹಿಸಲಾಗಿತ್ತು. ಕೂಡಲೇ ಅವರನ್ನು ಹೋಮ್ ಕ್ವಾರಂಟೈನ್ ಮಾಡಿ ಅವರ ಹಾಗೂ ಅವರ ಕುಟುಂಬದವರ ಸ್ವಾಬ್ ಪಡೆದು ಪರೀಕ್ಷೆಗೆ ಕಳಿಸಲಾಗಿತ್ತು. ವರದಿ ನೆಗೆಟಿವ್ ಬಂದಿದೆ ಎಂದು ವಿವರಿಸಿದರು.
Advertisement
Advertisement
ಗುರುವಾರದಂದು ಜಿಲ್ಲೆಗೆ ಮತ್ತೆ 17 ಜನ ಯುನೈಟೆಡ್ ಕಿಂಗ್ಡಮ್‍ನಿಂದ ವಾಪಸ್ಸಾಗಿದ್ದಾರೆ. ಅವರಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಇರೋದು ದೃಢವಾಗಿದೆ. ಈಗಾಗಲೇ ಅವರನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವೆಸಿದ್ದಾರೆ. ಪಾಸಿಟಿವ್ ಬಂದವರ ಮನೆಯವರ ಮೇಲೂ ತೀವ್ರ ನಿಗಾ ವಹಿಸಿದ್ದು, ಸ್ವಾಬ್‍ಗಳನ್ನ ಪರೀಕ್ಷೆಗೆ ಕಳಿಸಲಾಗಿದೆ. ಉಳಿದ 16 ಜನರ ವರದಿ ನೆಗೆಟಿವ್ ಬಂದಿದೆ ಎಂದರು.