ಬೆಂಗಳೂರು: ಸಖತ್ ಸದ್ದು ಮಾಡಿದ್ದ ಬ್ರಹ್ಮಚಾರಿ ಸಿನಿಮಾ ಮೂಲಕ ಮೋಡಿ ಮಾಡಿದ್ದ ನಿನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವಾ ಜೋಡಿ ಇದೀಗ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಲು ಮುಂದಾಗಿದೆ.
Advertisement
ತಮ್ಮ ವಿಭಿನ್ನ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವ ನಿನಾಸಂ ಸತೀಶ್ ಕ್ವಾಟ್ಲೆ ಸತೀಶಾ, ಲವ್ ಇನ್ ಮಂಡ್ಯ, ಅಯೋಗ್ಯ ಸೇರಿದಂತೆ ಹತ್ತು ಹಲವು ವಿಭಿನ್ನ ಸಿನಿಮಾಗಳ ಮೂಲಕ ಪರಿಚಿತರಾಗಿದ್ದಾರೆ. ಅಲ್ಲದೆ ಗೋದ್ರಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇದೀಗ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಅದಿತಿ ಪ್ರಭುದೇವಾ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಬ್ರಹ್ಮಚಾರಿ ಸಿನಿಮಾ ಮೂಲಕ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದ ಜೋಡಿ ಈ ಹೊಸ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದೆ ನೋಡಬೇಕಿದೆ.
Advertisement
Advertisement
ಅಂದಾಗೆ ಹೊಸ ಸಿನಿಮಾಗೆ ‘ಪೆಟ್ರೋಮ್ಯಾಕ್ಸ್’ ಎಂದು ಹೆಸರಿಡಲಾಗಿದ್ದು, ವಿಜಯ ಪ್ರಸಾದ್ ಅವರು ನಿರ್ದೇಶಿಸುತ್ತಿದ್ದಾರೆ. ಅಕ್ಟೋಬರ್ ಎರಡನೇ ವಾರದಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗಿದೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಸಲು ಸಿದ್ಧತೆ ನಡೆಸಲಾಗಿದೆ.
Advertisement
ಈ ಕುರಿತು ಮಾಹಿತಿ ನೀಡಿರುವ ನಿರ್ದೇಶಕ ವಿಜಯ ಪ್ರಸಾದ್, ಈ ಸಿನಿಮಾವನ್ನು 2013ರಲ್ಲೇ ಆರಂಭಿಸಲು ಚಿಂತಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ನಿನಾಸಂ ಸತೀಶ್ ಹಲವು ವರ್ಷಗಳಿಂದ ವಿಭಿನ್ನ ಚಿತ್ರಗಳಲ್ಲಿ ನಟಿಸುವ ಮೂಲಕ ಬೆಳೆದು ನಿಂತಿದ್ದು, ಅವರಿಗೆ ತಕ್ಕಂತೆ ಸಿನಿಮಾ ಕಥೆಯನ್ನು ಮಾರ್ಪಾಡು ಮಾಡಲಾಗಿದೆ. ಚಿತ್ರದ ಟೈಟಲ್ ಹೊರತುಪಡಿಸಿ ಮೂಲ ಕಥೆಯಲ್ಲಿ ಉಳಿದೆಲ್ಲವನ್ನೂ ಬದಲಾಯಿಸಲಾಗಿದೆ. ಸತೀಶ್‍ಗೆ ಜೋಡಿಯಾಗಿ ಅದಿತಿ ಪ್ರಭುದೇವಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಾಲ್ವರು ಅನಾಥರ ಸುತ್ತ ಕಥೆ ಸುತ್ತುತ್ತದೆ. ಇದನ್ನು ಸತೀಶ್, ಅರುಣ್, ನಾಗಭೂಷಣ್ ಹಾಗೂ ಹೇಮಾ ದತ್ ಬರೆದಿದ್ದಾರೆ. ಪೆಟ್ರೋಮ್ಯಾಕ್ಸ್ ಬೆಳಕನ್ನು ಸೂಚಿಸುತ್ತದೆ. ಅದು ಈ ನಾಲ್ವರ ಜೀವನದಲ್ಲಿ ಅವಶ್ಯವಾಗಿದೆ. ಹೀಗಾಗಿ ಈ ಟೈಟಲ್ ಇಡಲಾಗಿದೆ. ನನ್ನ ಹಿಂದಿನ ಸಿನಿಮಾಗಳ ರೀತಿಯಲ್ಲೇ ಈ ಚಿತ್ರದಲ್ಲಿ ಸಹ ಭಾವನೆ, ಮಾನವೀಯ ಮೌಲ್ಯ, ಬುದ್ಧಿ, ಹಾಸ್ಯ ಹಾಗೂ ಸಾಮಾಜಿಕ ಅಂಶಗಳ ಮೇಲೆ ಕೇಂದ್ರಿಕೃತವಾಗಿದೆ ಎಂದು ಸಿನಿಮಾದ ಕಥೆ ಕುರಿತು ವಿವರಿಸಿದ್ದಾರೆ.
ಸತೀಶ್ ಸಹ ತಮ್ಮ ಹೊಸ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದು, ಟಿವಿ ಸಿರಿಯಲ್‍ಗಳಲ್ಲಿ ವಿಜಯ ಅವರ ಜೊತೆ ಕೆಲಸ ಮಾಡಿದ್ದೇನೆ. ಅವರ ಬರವಣಿಗೆಯ ದೊಡ್ಡ ಫ್ಯಾನ್ ನಾನು. ಹೀಗಾಗಿ ಈ ಪ್ರಾಜೆಕ್ಟ್ ಒಪ್ಪಿಕೊಂಡೆ. ಈ ಸಿನಿಮಾ ಪ್ರೇಕ್ಷಕರನ್ನು ಒಂದು ಫನ್ ಲೋಕಕ್ಕೆ ಕೊಂಡೊಯ್ಯುತ್ತದೆ. ಇದರ ಜೊತೆಗೆ ಪ್ರತಿಯೊಬ್ಬರ ಜೀವನದಲ್ಲಿ ಸಂಬಂಧಗಳು ಹೇಗೆ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಸಿನಿಮಾದಲ್ಲಿ ನಿನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವಾ ಅವರ ಕೆಮಿಸ್ಟ್ರಿ ಹೇಗೆ ಮೂಡಿ ಬರಲಿದೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ. ಮತ್ತೊಮ್ಮೆ ಈ ಜೋಡಿ ಪ್ರೇಕ್ಷಕರನ್ನು ಹೇಗೆ ಸೆಳೆಯುತ್ತೆ ಕಾದು ನೋಡಬೇಕಿದೆ.