– ಬ್ಯಾರಿಕೇಡ್‍ಗಳ ಮೇಲೆ ಕಲ್ಲು ಹಾಕಿದ ಕಿಡಿಗೇಡಿಗಳು
ಬಳ್ಳಾರಿ: ಸರ್ಕಾರ ಕೊರೊನಾ ಕಠಿಣ ನಿಯಮಗಳನ್ನ ತಂದಿದೆ. ಆದ್ರೆ ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಕಾಡ ಸಿದ್ದೇಶ್ವರ ಜಾತ್ರೆಯಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿ ರೈಥೋತ್ಸವ ಮಾಡಲಾಗಿದೆ.
Advertisement
ಜಿಲ್ಲೆಯ ಎಲ್ಲ ಜಾತ್ರಾ ಮಹೋತ್ಸವದ ರಥ ಎಳೆಯಲು ಜಿಲ್ಲಾಡಳಿತ ನಿಷೇಧ ಹೇರಿದೆ. ಭಕ್ತರ ಒತ್ತಾಯದ ಮೇರೆಗೆ ಐದು ಅಡಿ ಉದ್ದದವರೆಗೂ ತೇರು ಎಳೆಯಲು ಅವಕಾಶ ನೀಡಲಾಗಿತ್ತು. ಜಾತ್ರೆಯ ವೇಳೆ ಕೆಲ ಯುವಕರು ಪ್ರತಿ ವರ್ಷದಂತೆ ನಿಗದಿತ ಸ್ಥಳದವರೆಗೂ ಎಳೆಯಲು ಮುಂದಾಗಿದ್ದರ. ಐದು ಅಡಿಗಿಂತ ಹೆಚ್ಚು ಮುಂದೆ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ ಎಂದು ಹೇಳಿದ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು.
Advertisement
Advertisement
ಯುವಕರ ಗುಂಪು ಬ್ಯಾರಿಕೇಡ್ ಕಿತ್ತೆಸೆದು ರಥೋತ್ಸವಕ್ಕೆ ಮುಂದಾದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಲಠಠಿ ಬೀಸಿದ್ದಾರೆ. ಕೆಲ ಕಿಡಿಗೇಡಿಗಳು ಬ್ಯಾರಿಕೇಡ್ ಗಳು ಒಂದೆಡೆ ಸೇರಿಸಿ ಅವುಗಳ ಮೇಲೆ ಕಲ್ಲು ಎತ್ತಿ ಹಾಕಿ ಜಖಂಗೊಳಿಸಿ ಪುಂಡತನ ಮೆರೆದಿದ್ದಾರೆ.
Advertisement
ತಳ್ಳಾಟ- ನೂಕಾಟದಲ್ಲಿ ಓರ್ವ ಪೊಲೀಸ್ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಓರ್ವ ಪೇದೆ ಸೇರಿದಂತೆ ಕೆಲ ಭಕ್ತರು ಗಾಯಗೊಂಡಿದ್ದಾರೆ. ರಥೋತ್ಸವದ ವೇಳೆಯ ಗಲಾಟೆ ದೃಶ್ಯಗಳು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿವೆ.