ವಿಜಯಪುರ: ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿ ಬ್ಯಾನ್ ಮಾಡಿದ್ದರೆ ಓಕೆ. ಆದರೆ ಈ ಬ್ಯಾನ್ ಕೇವಲ ಗಣೇಶ ಚತುರ್ಥಿಗಷ್ಟೇ ಸೀಮಿತವಾದ್ರೆ ಸರಿಯಲ್ಲ. ಅದನ್ನ ನಾನು ವಿರೋಧ ಮಾಡ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗಣೇಶ ಚತುರ್ಥಿ, ಮೊಹರಂ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ
Advertisement
Advertisement
ಕೊರೊನಾ 3 ನೇ ಅಲೆ ಪಕ್ಕಾ ಇದೆ ಅಂತಾ ವರದಿ ಇದೆ. ನಾವು ಜನರ ಪ್ರಾಣದ ಜೊತೆ ಚಲ್ಲಾಟ ಆಡುವುದು ಬೇಡ. ಆದರೆ ಮುಂದೆ ಯಾವುದೇ ಮೊಹರಂ ಬರಲಿ, ಸುಡಗಾಡ ಇರಲಿ ಎಲ್ಲದಕ್ಕೂ ಇಂತಹ ಬ್ಯಾನ್ ಆಗಬೇಕು. ಅವರಿಗೊಂದು ಕಾನೂನು, ನಮಗೊಂದು ಕಾನೂನು ಬೊಮ್ಮಾಯಿ ಸರ್ಕಾರದಲ್ಲಿ ನಡೆಯುವುದಿಲ್ಲ. ಒಂದು ವೇಳೆ ವ್ಯತ್ಯಾಸ ಆದರೆ ಅದನ್ನ ಉಲ್ಲಂಘನೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಯತ್ನಾಳ್ ವಾರ್ನ್ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ನಿಷೇಧವನ್ನು ಹಿಂಪಡೆಯಬೇಕು: ಶ್ರೀರಾಮಸೇನೆ
Advertisement