– ದಾವಣಗೆರೆಗೆ ರಾಜಧಾನಿ ಆಗೋ ಅರ್ಹತೆ ಇದೆ
ದಾವಣಗೆರೆ: ಬ್ಯಾಂಡ್ ಬಾರಿಸಿ ತಮಟೆ ಬಾರಿಸಿ ಬಾಯಿ ಬಡಿದುಕೊಂಡರೆ ಯಾರಿಗೂ ಸಚಿವ ಸ್ಥಾನ ಸಿಗಲ್ಲ ಎಂದು ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ವಿಚಾರವಾಗಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಎಲ್ಲ ಶಾಸಕ ಸಭೆ ಮಾಡಿ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡುವಂತೆ ಸಿಎಂಗೆ ಒತ್ತಾಯ ಮಾಡಿದ್ದೇವೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
Advertisement
Advertisement
ದಾವಣಗೆರೆ ಮಧ್ಯ ಕರ್ನಾಟಕ ಇದಕ್ಕೆ ರಾಜಧಾನಿ ಆಗುವ ಅರ್ಹತೆ ಇದೆ. ದಾವಣಗೆರೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೈದ್ರಾಬಾದ್ ಕರ್ನಾಟಕ ಸಂಪರ್ಕ ಸೇತುವೆಯಾಗಿದೆ. ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು. ಬ್ಯಾಂಡ್ ಬಾರಿಸಿ ತಮಟೆ ಬಾರಿಸಿ ಬಾಯಿ ಬಡೆದುಕೊಂಡರೆ ಯಾರಿಗೂ ಸಚಿವ ಸ್ಥಾನ ಸಿಗಲ್ಲ. ರಾಜಕೀಯವಾಗಿ ನಾವು ಯಾರು ಸನ್ಯಾಸಿಗಳಲ್ಲ. ಎಲ್ಲರೂ ಒಗ್ಗಟ್ಟಾಗಿ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಕೇಳಿದ್ದೇವೆ ಎಂದು ಹೇಳಿದರು.
Advertisement
Advertisement
ಎಲ್ಲರೂ ಒಗ್ಗಟ್ಟಾಗಿ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಕೇಳಿದ್ದೇವೆ. ಮೂರು ಬಾರಿ ಶಾಸಕ ಆಗಿ ಆಯ್ಕೆಯಾಗಿದ್ದೇನೆ. ನಾನು ಸಚಿವ ಆಗಬೇಕು ಎಂದು ಜನರು ಆಸೆ ಪಡುತ್ತಿದ್ದಾರೆ. ಸಿಎಂ ಯಾವುದೇ ನಿರ್ಧಾರ ತಗೊಂಡರೂ ನಾವು ಬದ್ಧರಾಗಿದ್ದೇವೆ. ಹೀಗಾಗಿ ಹಾದಿ ರಂಪ ಬೀದಿ ರಂಪ ಮಾಡೋದು ನಮಗೆ ಇಷ್ಟ ಇಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದರು.
ಇದೇ ವೇಳೆ ಸೋತವರಿಗೆ ಸಚಿವ ಸ್ಥಾನ ನೀಡುವುದಕ್ಕೆ ನನ್ನ ವಿರೋಧವಿದೆ ಎಂದು ಹೇಳುವ ಮೂಲಕ ಸಿಪಿ ಯೋಗೆಶ್ವರ್ ಸಚಿವ ಸ್ಥಾನ ನೀಡಲು ಎಂಪಿ ರೇಣುಕಾಚಾರ್ಯ ಅಪಸ್ವರ ಎತ್ತಿದ್ದಾರೆ. ಜನರಿಂದ ನೇರವಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಿ. ಸೋತವರಿಗೆ ಸಚಿವ ಸ್ಥಾನ ನೀಡುವುದಕ್ಕೆ ನನ್ನ ವಿರೋಧವಿದೆ. ನಾವು ಜಾರಕಿಹೊಳಿ ಮನೆಯಲ್ಲಿ ಸಭೆ ಸೇರಿದ್ದು ಸಿಪಿವೈಗೆ ಸಚಿವ ಸ್ಥಾನ ತಪ್ಪಿಸಲು ಅಲ್ಲ. ನಾವು ಸೇರಿದ್ದರ ಹಿಂದೆ ಬೇರೆ ಉದ್ದೇಶವಿದೆ ಎಂದು ಹೇಳಿದರು.