– ನಾವು ಸಾಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇವೆಂದು ಸೋಂಕಿತೆ ಕಣ್ಣೀರು
– ಸೋಂಕಿತರಿಗೆ ಔಷಧಿ ನೀಡಲು ಮನೆಗೆ ಬೀಡದ ಮಾಲೀಕನ ಪತ್ನಿ
ಪಾಟ್ನಾ: ಬ್ಯಾಂಕ್ ಮಹಿಳಾ ಉದ್ಯೋಗಿಗಳಿಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಇದನ್ನು ತಿಳಿದ ಮನೆಯ ಮಾಲೀಕ ಮನೆ ಖಾಲಿ ಮಾಡುವಂತೆ ಕಿರುಕುಳ ನೀಡಿರುವ ಘಟನೆ ಬಿಹಾರದ ಸಿಯೋಹಾರ್ ಜಿಲ್ಲೆಯ ಭೈರ್ವಿ ನಗರದಲ್ಲಿ ನಡೆದಿದೆ.
ಭೈರ್ವಿ ನರದಲ್ಲಿ ಇರುವ ಬ್ಯಾಂಕ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತೆಯರು ಒಟ್ಟಿಗೆ ಒಂದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಅವರು ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಇಬ್ಬರಿಗೂ ಕೊರೊನಾ ಇರುವುದು ದೃಢಪಟ್ಟಿದೆ. ಆಗ ಮಹಿಳೆಯರು ಹೋಗಿ ಮನೆ ಮಾಲೀಕ ಶೈಲೇಂದ್ರ ವರ್ಮಾಗೆ ಕೊರೊನಾ ಪಾಸಿಟಿವ್ ಬಂದಿರುವ ವಿಚಾರ ತಿಳಿಸಿದ್ದಾರೆ.
Advertisement
Advertisement
ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಿದಾಗ ಸುಮ್ಮನಿದ್ದ ಮಾಲೀಕ ಮತ್ತು ಆತನ ಪತ್ನಿ, ಮರುದಿನ ಮಹಿಳೆಯರಿಗೆ ಖಾಲಿ ಮಾಡುವಂತೆ ಹೇಳಿದ್ದಾರೆ. ಜೊತೆಗೆ ತಕ್ಷಣ ನೀವು ಮನೆ ಖಾಲಿ ಮಾಡಿ ಎಂದು ಕಿರುಕುಳ ನೀಡಿದ್ದಾರೆ. ಈ ವಿಚಾರದ ಬಗ್ಗೆ ನೋವಿನಿಂದ ಮಾತನಾಡಿರುವ ಸೋಂಕಿತ ಮಹಿಳೆಯೊಬ್ಬರು, ನಾವು ಜನ ಸೇವೆ ಮಾಡಲು ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತೇವೆ. ಸಾಮಾಜಕ್ಕಾಗಿ ಕೆಲಸ ಮಾಡುವ ನಮಗೆ ಈ ರೀತಿಯ ಪರಿಸ್ಥಿತಿಯಲ್ಲಿ ಜನರು ನಮ್ಮ ಬೆಂಬಲಕ್ಕೆ ಬರಬೇಕು. ಅದನ್ನು ಬಿಟ್ಟು ಈ ರೀತಿ ಕಿರುಕುಳ ನೀಡಬಾರದು ಎಂದು ಹೇಳಿದ್ದಾರೆ.
Advertisement
Advertisement
ಮಾಲೀಕನ ವಿರುದ್ಧ ದೂರು ನೀಡಿರುವ ಬ್ಯಾಂಕ್ ಮ್ಯಾನೇಜರ್ ಭಾಸ್ಕರ್ ಜಾ ಮಾತನಾಡಿ, ಕೊರೊನಾ ಪಾಸಿಟಿವ್ ಬಂದ ನಮ್ಮ ಇಬ್ಬರು ಉದ್ಯೋಗಿಗಳಿಗೆ ಅವರು ವಾಸವಿದ್ದ ಮನೆಯ ಮಾಲೀಕ ಶೈಲೇಂದ್ರ ವರ್ಮಾ ಮತ್ತು ಆತನ ಪತ್ನಿ ಮಾನಸಿಕ ಹಿಂಸೆ ನೀಡಿದ್ದಾರೆ. ಮನೆ ಖಾಲಿ ಮಾಡುವಂತೆ ಒತ್ತಡ ಹೇರಿದ್ದಾರೆ. ಜೊತೆಗೆ ನಮ್ಮ ಬ್ಯಾಂಕಿನ ಇತರೆ ಉದ್ಯೋಗಿಗಳು ಅವರಿಗೆ ಔಷಧಿ ಕೊಡಲು ಹೋದರೆ ಅದಕ್ಕೂ ಮಾಲೀಕ ಪತ್ನಿ ಅನುಮತಿ ನೀಡಿಲ್ಲ. ನಮ್ಮ ಉದ್ಯೋಗಿಗಳು ಹಾಲು ಮತ್ತು ನೂಡಲ್ಸ್ ತಿಂದುಕೊಂಡು ಜೀವನ ಮಾಡುತ್ತಿದ್ದಾರೆ ಎಂದಿದ್ದಾರೆ.
ಆದರೆ ಮಹಿಳಾ ಉದ್ಯೋಗಿಗಳು ಮತ್ತು ಬ್ಯಾಂಕ್ ಮ್ಯಾನೇಜರ್ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಮನೆಯ ಮಾಲೀಕ, ನಾನು ಅವರಿಗೆ ಕಿರುಕುಳ ನೀಡಿಲ್ಲ. ಬದಲಿಗೆ ನಿಮ್ಮ ಊರಿಗೆ ಹೋಗಿ ಎಂದು ಮನವಿ ಮಾಡಿಕೊಂಡಿದ್ದೇನೆ. ಇಲ್ಲಿನ ಬೇರೆ ಮನೆಯವರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಈ ರೀತಿ ಹೇಳಿದ್ದೇನೆ ಎಂದು ಹೇಳಿದ್ದಾರೆ.