– ರ‍್ಯಾಪಿಡ್ ಟೆಸ್ಟ್ ವೇಳೆ ಬಹಿರಂಗ
ಚೆನ್ನೈ: ಪ್ರಮುಖ ರಾಷ್ಟ್ರೀಯ ಬ್ಯಾಂಕ್‍ನ ಒಂದೇ ಶಾಖೆಯ 38 ಜನ ಉದ್ಯೋಗಿಗಳಿಗೆ ಕೊರೊನಾ ಸೋಂಕು ತಗುಲಿರುವ ಆಘಾತಕಾರಿ ಘಟನೆ ನಡೆದಿದೆ.
ತಮಿಳುನಾಡಿನ ತಿರುಚ್ಚಿನಾಪಳ್ಳಿಯ ಬ್ಯಾಂಕ್‍ನ ಪ್ರಧಾನ ಶಾಖೆಯ 38 ಜನ ಉದ್ಯೋಗಿಗಳಿಗೆ ಸೋಂಕು ತಗುಲಿದೆ. ಈ ಕುರಿತು ಬ್ಯಾಂಕ್‍ನ ಅಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕ ಸೇವೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಬ್ಯಾಂಕ್‍ನ ಶಾಖೆಗೆ ಭೇಟಿ ನೀಡಿದ ಗ್ರಾಹಕರಿಗೂ ಈ ಕುರಿತು ತಿಳಿಸಲಾಗಿದ್ದು, ಸ್ವಯಂಪ್ರೇರಿತರಾಗಿ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ.
Advertisement
Advertisement
ಇತ್ತೀಚೆಗೆ ಇದೇ ಶಾಖೆಯ ಇತರೆ ಖಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ಅಧಿಕಾರಿ ಕೊರೊನಾಗೆ ಬಲಿಯಾಗಿದ್ದಾರೆ. ಬ್ಯಾಂಕ್‍ನಲ್ಲಿ ಇತ್ತೀಚೆಗೆ ನಡೆಸಿದ ಮಾಸ್ ಮೆಡಿಕಲ್ ಸ್ಕ್ರೀನಿಂಗ್ ವೇಳೆ ಈ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಬ್ಯಾಂಕ್‍ಗೆ ಸ್ಯಾನಿಟೈಸ್ ಸೇರಿದಂತೆ ವಿವಿಧ ಬಗೆಯ ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲವೂ ಪೂರ್ಣವಾಗಿದೆ. ನಾಳೆಯಿಂದಲೇ ಬ್ಯಾಂಕ್ ಸಾರ್ವಜನಿಕರ ಸೇವೆಗೆ ತೆರೆಯಲಿದೆ ಎಂದು ಬ್ಯಾಂಕ್‍ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ನಗರಸಭೆಯ ಆರೋಗ್ಯಾಧಿಕಾರಿಗಳು ಬ್ಯಾಂಕ್‍ಗೆ ಭೇಟಿ ನೀಡಿದ ಗ್ರಾಹಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಮಹರಾಷ್ಟ್ರ ಬಳಿಕ ತಮಿಳು ನಾಡು ದೇಶದಲ್ಲೇ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದ್ದು, ಶನಿವಾರದ ವೇಳೆಗೆ ತಮಿಳುನಾಡಿನಲ್ಲಿ ಒಟ್ಟು 2,06,737 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.