ಬೆಂಗಳೂರು: ಸಿಎಂ ಸ್ಥಾನದಿಂದ ಕೆಳಗಿಳಿದರೂ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲ್ಲ. ತಮಗೆ ರಾಜ್ಯಪಾಲರ ಹುದ್ದೆಯೂ ಬೇಡ ಎಂದಿರುವ ಯಡಿಯೂರಪ್ಪನವರ ಮುಂದಿನ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಮೂಲಗಳ ಪ್ರಕಾರ, ವಿಜಯೇಂದ್ರರನ್ನು ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಮಾಡುವಂತೆ ಹೈಕಮಾಂಡ್ ಮೇಲೆ ಯಡಿಯೂರಪ್ಪ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸದ್ಯಕ್ಕೆ ಮೌನವೇ ಆಭರಣ ಎನ್ನುವಂತಿದ್ದಾರೆ. ಇದನ್ನೂ ಓದಿ : ಸ್ವಾಮೀಜಿಗಳು ಬಿಜೆಪಿಗೆ ಬೆದರಿಕೆ ಹಾಕುವುದು ತಪ್ಪು: ಈಶ್ವರಪ್ಪ
Advertisement
Advertisement
ಈ ಮಧ್ಯೆ, ಬಿಎಸ್‍ವೈ ಸಮಕಾಲೀನರಾದ ಕೆಎಸ್ ಈಶ್ವರಪ್ಪ ಡಿಸಿಎಂ ಆಗಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಇದ್ರ ಭಾಗವಾಗಿ ಉತ್ತರ ಕರ್ನಾಟಕದ ಶಕ್ತಿ ದೇವತೆ ಬಾದಾಮಿಯ ಬನಶಂಕರಿ ದೇಗುಲಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Advertisement
ನಾನು ಡಿಸಿಎಂ ಆಗ್ಬೇಕು ಅಂತಾ ಜನ ಬಯಸ್ತಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ನಂಬರ್ 2 ಸ್ಥಾನದ ಮೇಲಿನ ಆಸೆಯನ್ನು ಹೊರಹಾಕಿದ್ದಾರೆ. ವಲಸಿಗರ ವಿಚಾರದಲ್ಲಿಯೂ ಯೂಟರ್ನ್ ತೆಗೆದುಕೊಂಡಿದ್ದಾರೆ. ಬಿಜೆಪಿ ಹಾಲು, ಹೊರಗಿನಿಂದ ಬಂದವರು ಜೇನು, ಎರಡು ಸೇರಿದ್ರೇ ಹಾಲು ಜೇನು ಎಂದಿದ್ದಾರೆ.