ಬೆಂಗಳೂರು: ಬೊಮ್ಮಾಯಿ ಅವರಿಗೆ ನಮ್ಮ ಸಹಕಾರ ಇರುತ್ತೆ. ಕೇಂದ್ರ ಸರ್ಕಾರದಿಂದ ಸಮಸ್ಯೆ ಇಲ್ಲ ಅಂದ್ರೆ ನಾವು ರಾಜ್ಯಸಭೆಯಲ್ಲೂ ಸಹಕಾರ ಕೊಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.
Advertisement
ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಪದ್ಮನಾಭನಗರದಲ್ಲಿನ ನಿವಾಸಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ತೆಗಿಬೇಕು ಅಂತಾ ನಾವು ಹೇಳಿಲ್ಲ. 75 ವರ್ಷ ಅಂತಾ ನಿಬಂಧನೆ ಇದೆ ಅಂತಾ ಅವರ ಪಕ್ಷದವರು ಮನವಿ ಮಾಡಿದ್ದಾರೆ. ಅದಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ಬೊಮ್ಮಾಯಿ ಅವರು ನೂತನ ಸಿಎಂ ಆಗಿದ್ದಾರೆ. ಇವರಿಗೆ ನಮ್ಮ ಸಹಕಾರ ಇರುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಪದ್ಮನಾಭಗರದ ನಿವಾಸಕ್ಕೆ ತೆರಳಿ ಎಚ್‍ಡಿಡಿ ಆಶೀರ್ವಾದ ಪಡೆದ ಸಿಎಂ
Advertisement
Advertisement
ಯಡಿಯೂರಪ್ಪ ಆಶೀರ್ವಾದ ಇಲ್ಲದೆ ಸರ್ಕಾರ ನಡೆಯಲ್ಲ. ಸರ್ಕಾರ ನಡೆಯಬೇಕಾದ್ರೆ ಯಡಿಯೂರಪ್ಪ ಆಶೀರ್ವಾದ ಇರಬೇಕು. ಯಡಿಯೂರಪ್ಪ ಅವರಿಂದಲೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ ಎಂದರು.
Advertisement
ದೆಹಲಿಯಲ್ಲಿ ಇದ್ದಾಗ ನಿಮ್ಮ ಭೇಟಿಗೆ ಬರುತ್ತೇನೆ ಎಂದು ಬೊಮ್ಮಾಯಿ ಅವರು ಹೇಳಿದ್ದರು. ಆಗ ಸಾಕಷ್ಟು ಬ್ಯುಸಿ ಶೆಡ್ಯೂಲ್ ಇತ್ತು ಆಗಲಿಲ್ಲ ಇವತ್ತು ಭೇಟಿಗೆ ಸಮಯವಕಾಶ ನಿಗದಿಮಾಡಲಾಗಿತ್ತು. ಕೆಳಗೆ ಇಳಿದು ಹತ್ರ ಹೋಗಿ ಸ್ವಾಗತ ಮಾಡಲು ಆಗಲ್ಲ ಅಂತಾ ಹಾಸನದಲ್ಲಿ ಇದ್ದ ರೇವಣ್ಣ ಅವರನ್ನು ಕರೆಸಿದ್ದೆ. ರೇವಣ್ಣ ಸಿಎಂ ಅವರನ್ನು ಸ್ವಾಗತ ಮಾಡಿ ಕರೆದುಕೊಂಡು ಬಂದ್ರು. ನಾನು, ಅವರ ತಂದೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ತಂದೆ ಕಾಲದ ಹಿರಿ ಮನುಷ್ಯ ನಾನೊಬ್ಬನೇ ಈಗ. ಆಶೀರ್ವಾದ ಪಡೆಯಲು ಬರ್ತೀನಿ ಅಂದ್ರು, ಬನ್ನಿ ಎಂದು ಹೇಳಿದ್ದೆ ಎಂದರು.
ಎಲ್ಲರೂ ಮುಖ್ಯಮಂತ್ರಿ ಆಗಲು ಆಗಲ್ಲ:
ಜನತಾದಳದಿಂದ ಸಿದ್ದರಾಮಯ್ಯ ಜೊತೆಯಲ್ಲಿ ಹೋದವರು ಎಲ್ಲ ಮುಖ್ಯಮಂತ್ರಿಯಾಗಿದ್ದಾರಾ? ಸಿದ್ದರಾಮಯ್ಯ ಜೊತೆ ಬಹಳ ಜನ ಹೋಗಿದ್ದಾರೆ. ಎಲ್ಲರೂ ಮುಖ್ಯಮಂತ್ರಿ ಆಗಲೂ ಸಾಧ್ಯವಿಲ್ಲ. ಎಲ್ಲರೂ ಮಿನಿಸ್ಟರ್ ಆಗುವುದಕ್ಕೂ ಆಗಲಿಲ್ಲ. ಬೊಮ್ಮಾಯಿ ಅವರು ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಜೊತೆ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಬಿಜೆಪಿಯಲ್ಲಿ ನಡೆದುಕೊಂಡ ರೀತಿ ನೋಡಿ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ ಎಂದು ನುಡಿದರು.
ಕೆಲಸ ಮಾಡಲು ವಯಸ್ಸು ಮುಖ್ಯ ಅಲ್ಲ, ವಯಸ್ಸಿದ್ದೂ ಮನೆಯಲ್ಲಿ ಮಲಗಿದ್ರೆ ಏನು ಪ್ರಯೋಜನ? ಮಹಾಭಾರತದಲ್ಲಿ ಭೀಷ್ಮ 10 ದಿನ ಹೋರಾಟ ಮಾಡುತ್ತಾನೆ, ಕರ್ಣ ಒಂದೂವರೆ ದಿನ ಹೋರಾಟ ಮಾಡುತ್ತಾನೆ, ವಯಸ್ಸು ಮುಖ್ಯ ಆಗಲ್ಲ. ಯಡಿಯೂರಪ್ಪ ಅವರಿಗೆ ನನಗಿಂತ ಇನ್ನೂ ವಯಸ್ಸಿದೆ, ನನಗೆ 89 ವರ್ಷ ವಯಸ್ಸು, ಯಡಿಯೂರಪ್ಪಗೆ 78 ವರ್ಷ ವಯಸ್ಸು ಅವರಿಗೆ ಇನ್ನೂ ಶಕ್ತಿ ಇದೆ. ಜಿಲ್ಲೆಗಳಿಗೆ ಹೋಗಬಹುದು. ನಾನು ಎಲ್ಲ ಜಿಲ್ಲೆಗಳಿಗೂ ಹೋಗಲು ಆಗುವುದಿಲ್ಲ ಆದರೆ ಕೆಲವು ಕಡೆ ನಾನು ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.