– ಪೊಲೀಸ್ ನೀಡಿದ ಮಿಷನ್ ಪೂರ್ಣಗೊಳಿಸಿದ ಕನ್ನಡಿಗ
– ವೀಡಿಯೋ ವೈರಲ್
ಚೆನ್ನೈ: ರಸ್ತೆಯಲ್ಲಿ ಸಂಚರಿಸುವ ಬೈಕ್ ಕಾರುಗಳನ್ನು ನಿಲ್ಲಿಸಿ ತಪಾಸಣೆ ನಡೆಸುವುದು ಪೊಲೀಸರ ಕರ್ತವ್ಯ. ಆದರೆ ಇಲ್ಲೊಬ್ಬರು ಪೊಲೀಸ್ ಪೇದೆ ಪ್ರವಾಸಿಗನ ಬೈಕನ್ನು ನಿಲ್ಲಿಸಿ ಮುಂದೆ ಚಲಿಸುತ್ತಿರುವ ಬಸ್ಸ್ ನಲ್ಲಿರುವ ಮಹಿಳೆಯೊಬ್ಬರಿಗೆ ಔಷಧಿಯ ಬಾಟಲ್ ಕೊಡುವಂತೆ ಮನವಿ ಮಾಡಿಕೊಂಡು ಮಾನವೀಯತೆ ಮೆರೆದಿದ್ದಾರೆ.
Advertisement
ಕರ್ನಾಟಕ ಮೂಲದ ಪ್ರವಾಸಿಗರೊಬ್ಬರು ಬೈಕ್‍ನಲ್ಲಿ ತಮಿಳುನಾಡಿನ ತೆಂಕಾಸಿ ಬಳಿ ಪ್ರಯಾಣಿಸುತ್ತಿದ್ದರು. ಈ ವೇಳೆ ತಮಿಳುನಾಡಿನ ಪೊಲೀಸ್ ಪೇದೆ ಬೈಕ್ ನಿಲ್ಲಿಸಿ ಬೈಕ್ ರೈಡರ್ ಬಳಿ ಯಾವ ಊರು ಎಂದು ವಿಚಾರಿಸಿದ್ದಾರೆ. ಬೈಕ್ ರೈಡರ್ ಕರ್ನಾಟಕದಿಂದ ಬಂದಿದ್ದೇನೆ ಎನ್ನುತ್ತಾರೆ. ನಂತರ ಪೇದೆ ನೀವು ಚಲಿಸುವ ಮುಂದಿನ ದಾರಿಯಲ್ಲಿ ರಾಜ್ಯದ ಸರ್ಕಾರಿ ಬಸ್ ಹೋಗುತ್ತಿದೆ. ಅದರಲ್ಲಿ ಪ್ರಯಾಣಿಸುವ ಮಹಿಳೆಯೊಬ್ಬರು ಔಷಧಿಯ ಬಾಟಲ್ ಬೀಳಿಸಿಕೊಂಡು ಹೋಗಿದ್ದಾರೆ, ಅವರಿಗೆ ಔಷಧಿಯನ್ನ ತಲುಪಿಸಬಹುದೇ ಎಂದು ವಿನಂತಿ ಮಾಡಿಕೊಂಡಿದ್ದಾರೆ. ಬೈಕ್ ರೈಡರ್ ತಲುಪಿಸುವುದಾಗಿ ತಿಳಿಸಿ ಔಷಧಿ ಬಾಟಲ್ ಪಡೆದುಕೊಂಡು ಬಸ್‍ನ್ನು ಹಿಂಬಾಲಿಸಿ ಮಹಿಳೆಗೆ ಕೊಟ್ಟಿದ್ದಾರೆ.
Advertisement
Advertisement
ಈ ವೀಡಿಯೋವನ್ನು ಅನ್ನಿಅರುಣ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಹರಿಬಿಟ್ಟಿದ್ದಾರೆ ವೀಡಿಯೋ ವೀಕ್ಷಿಸಿರುವ ಜನರು ಪೇದೆ ಮತ್ತು ಬೈಕ್ ರೈಡರ್ ನ ಸಂಭಾಷಣೆಯನ್ನು ಕೇಳಿ ಖುಷಿ ಪಟ್ಟಿದ್ದಾರೆ.
Advertisement
ಬೈಕ್ ರೈಡರ್ ಪೇದೆಯ ಕೈಯಿಂದ ಔಷಧಿ ಬಾಟಲ್ ಪಡೆದುಕೊಂಡು ಬಸ್‍ನ್ನು ಹಿಂಬಾಲಿಸಿಕೊಂಡು ಬಂದು ತಡೆದು ನಿಲ್ಲಿಸಿದ್ದಾರೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಔಷಧಿ ಯನ್ನು ನೀಡಿ ಮಿಷನ್ ಕಂಪ್ಲೀಟ್ ಎಂದು ಹೇಳಿದ್ದಾರೆ. ಈ ವೀಡಿಯೋವನ್ನು ಎರಡು ದಿನಗಳಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು ಹಲವು ರೀತಿಯ ಕಮೆಂಟ್‍ಗಳನ್ನು ಹಾಕಿ ಶೇರ್ ಮಾಡುತ್ತಿದ್ದಾರೆ.