– ಕಾರ್ ಚಾಲಕ ಪೊಲೀಸ್ ಠಾಣೆಗೆ ಹೋಗ್ತಾನೆ
ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿ ನಡೆದ ಅಪಘಾತದ ಕುರಿತು ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ್ ಸವದಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಡನ್ ಆಗಿ ಬೈಕ್ ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
Advertisement
ಅಂಜನಾದ್ರಿ ಬೆಟ್ಟದಿಂದ ಹಿಂದಿರುಗುವಾಗ ಹೈವೇಯಲ್ಲಿ ಅಪಘಾತವಾಯ್ತು. ಒಟ್ಟು ಎರಡು ಕಾರ್ ಗಳಲ್ಲಿ 10 ಜನ ಅಂಜನಾದ್ರಿಗೆ ಹೋಗಿದ್ದೀವಿ. ನನ್ನ ಕಾರ್ ಸುಮಾರು 30 ಕಿಲೋ ಮೀಟರ್ ದೂರ ಇತ್ತು. ಹಿಂದಿನಿಂದ ಬರುತ್ತಿದ್ದ ನನ್ನ ಕಾರ್ ಅಪಘಾತಕ್ಕೆ ಒಳಗಾಗಿದ್ದು, ಅದರಲ್ಲಿ ಸ್ನೇಹಿತರಿದ್ದರು. ನಮ್ಮ ಚಾಲಕನೇ ಕಾರ್ ಡ್ರೈವ್ ಮಾಡುತ್ತಿದ್ದನು.
Advertisement
Advertisement
ಅಪಘಾತವಾದ ಕೂಡಲೇ ಚಾಲಕ ನನಗೆ ಫೋನ್ ಮಾಡಿದರು. ಆಗ ಕೂಡಲೇ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಹಾಗೆಯೇ ಸ್ಥಳೀಯ ಪೊಲೀಸ್ ಠಾಣೆಗೆ ಮಾತನಾಡಿದ್ದೇನೆ. ನಮ್ಮ ಸ್ನೇಹಿತರಿಬ್ಬರಿಗೆ ಆಸ್ಪತ್ರೆ ವೆಚ್ಚ ನೀಡುವದಾಗಿ ಹೇಳಿದ್ದೇನೆ ಎಂದು ಹೇಳಿದರು.
Advertisement
ದೇವರಾಣೆ ಎಲ್ಲ ಸುಳ್ಳು:
ನನ್ನ ವಿರುದ್ಧ ಕೇಳಿ ಬಂದಿರುವ ಎಲ್ಲ ಆರೋಪಗಳು ಸುಳ್ಳು. ಯಾರ ಕೊರಳ ಪಟ್ಟಿಯನ್ನು ನಾವು ಹಿಡಿದಿಲ್ಲ. ಯಾರಿಗೂ ಅವಾಜ್ ಹಾಕಿಲ್ಲ. ಕುಟುಂಬಸ್ಥರ ನಂಬರ್ ಇರಲಿಲ್ಲ ಹಾಗಾಗಿ ಯಾರನ್ನೂ ಸಂಪರ್ಕಿಸಿಲ್ಲ. ಆದ್ರೆ ಕೂಡಲೇ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ. ಡ್ರೈವರ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಸದ್ಯ ಅಥಣಿಯಲ್ಲಿದ್ದಾನೆ. ಪೊಲೀಸರ ಮುಂದೆ ಹಾಜರಾಗ್ತಾನೆ. ದೇವರಾಣೆ, ನನ್ನ ವಿರುದ್ಧ ಕೇಳಿ ಬಂದ ಎಲ್ಲ ಆರೋಪಗಳು ಶುದ್ಧ ಸುಳ್ಳು.
ಅಪಘಾತ ನಡೆದಿದ್ದು ಎಲ್ಲಿ? ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಚಿತ್ರದುರ್ಗ-ಸೊಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಕೊಡ್ಲೆಪ್ಪ ಬೋಳಿ ಮೃತ ಬೈಕ್ ಸವಾರ. ಕುಡ್ಲೆಪ್ಪ ಹೊಲದಿಂದ ಮನೆಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಕಾರ್ ಡಿಕ್ಕಿಯಾಗುತ್ತಿದ್ದಂತೆ ಕೂಡ್ಲೆಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೂಡ್ಲೆಪ್ಪ ಸಾವನ್ನಪ್ಪಿದ್ದಾರೆ.
ಬೈಕ್‍ಗೆ ಕಾರ್ ಡಿಕ್ಕಿಯಾಗುತ್ತಿದ್ದಂತೆ ಡಿಸಿಎಂ ಪುತ್ರ ಚಿದಾನಂದ್ ನಂಬರ್ ಪ್ಲೇಟ್ ಕಲ್ಲಿನಿಂದ ಜಜ್ಜಿದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತವಾದ ಸ್ಥಳೀಯರು ಚಿದಾನಂದ್ ಸವದಿಯನ್ನು ಕೆಲಹೊತ್ತು ಹಿಡಿದಿಟ್ಟಿದ್ದರು. ಈ ವೇಳೆ ನಾನು ಡಿಸಿಎಂ ಲಕ್ಷ್ಮಣ್ ಸವದಿ ಮಗ ಅಂತ ಅವಾಜ್ ಹಾಕಿರುವ ಬಗ್ಗೆ ಸ್ಥಳೀಯರು ಹೇಳುತ್ತಿದ್ದಾರೆ.