ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಳೆಯ ಮರಗಳಿಂದಾಗಿ ಹಲವು ಅನಾಹುತಗಳು ಸಂಭವಿಸುತ್ತಿರುವುದು ತಿಳಿದೇ ಇದೆ. ಬಿಬಿಎಂ ಮಾತ್ರ ಇಂಹ ಮರಗಳನ್ನು ಗುರುತಿಸಿ ಕೊಂಬೆಗಳನ್ನು ಕತ್ತರಿಸುತ್ತಿಲ್ಲ. ಇದೀಗ ಮತ್ತೊಂದು ಅನಾಹುತ ಸಂಭವಿಸಿದ್ದು, ಬೈಕ್ ಸವಾರರೊಬ್ಬರ ಮೇಲೆ ಮರದ ಕೊಂಬೆ ಬಿದ್ದು ತೆಲೆ ತೀವ್ರ ಪೆಟ್ಟಾಗಿದೆ.
Advertisement
ನಗರದ ತಿಲಕ್ ನಗರದಲ್ಲಿ ಈ ದುರದೃಷ್ಟಕರ ಘಟನೆ ನಡೆದಿದ್ದು, ಈ ಘಟನೆಯಿಂದಾಗಿ ಬೈಕ್ ಸವಾರರು ಭಯಭೀತರಾಗಿದ್ದಾರೆ. ಸಂಚರಿಸುವಾಗ ನಮ್ಮ ತಲೆ ಮೇಲೆ ಕೊಂಬೆಗಳು ಬಿದ್ದರೆ ಹೇಗೆ ಎಂದು ಆತಂಕಗೊಂಡಿದ್ದಾರೆ. ಇಂದು ಸಂಜೆ ವ್ಯಕ್ತಿಯೊಬ್ಬರು ಬೈಕ್ ಮೇಲೆ ಸಂಚರಿಸುತ್ತಿರುವಾಗಲೇ ತಲೆಯ ಮೇಲೆ ಮರದ ಕೊಂಬೆ ಬಿದ್ದಿದ್ದು, ತೀವ್ರ ಗಾಯವಾಗಿ ರಕ್ತಸ್ರಾವವಾಗಿದೆ.
Advertisement
Advertisement
ತೀವ್ರ ರಕ್ತಸ್ರಾವವಾಗಿ ಗಾಯಗೊಂಡ ವ್ಯಕ್ತಿಯನ್ನು ಸದ್ಯ ನಿವಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ವ್ಯಕ್ತಿಯ ಸ್ಥಿತಿ ಇದೀಗ ಗಂಭೀರವಾಗಿದೆ. ಇದರಿಂದಾಗಿ ಬೆಂಗಳೂರು ಜನತೆ ತೀವ್ರ ಆತಂಕಗೊಂಡಿದ್ದು, ಬೈಕ್ ಮೇಲೆ ಸಂಚರಿಸಲು ಭಯ ಪಡುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.