ಚಾಮರಾಜನಗರ: ಪಲ್ಸರ್ ಬೈಕ್‍ನಲ್ಲಿ ನಾಲ್ವರ ಪ್ರಯಾಣ ಮಾಡುತ್ತಿರುವಾಗ ಬೈಕ್, ಜೀಪ್ ಡಿಕ್ಕಿಯಾಗಿ ಗಂಭೀರ ಗಾಯ, ಓರ್ವ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಗರಗನಹಳ್ಳಿ ಗೇಟ್ ಬಳಿ ನಿನ್ನೆ ನಡೆದಿದೆ.
ಗಾಯಗೊಂಡ ಇಬ್ಬರು ರಸ್ತೆಯಲ್ಲೆ ನರಳಾಡುತ್ತಿದ್ದರೆ ಇತ್ತ ಬೈಕ್‍ನಲ್ಲಿದ್ದ ಮತ್ತೋರ್ವ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಅಪಘಾತಗೊಂಡವರ ಸಹಾಯಕ್ಕೆ ಬಾರದೆ ಸ್ಥಳೀಯರು ಮೊಬೈಲ್ ಚಿತ್ರೀಕರಣ ಮಾಡಿಕೊಂಡಿದ್ದಾರೆ.
ಬೈಕ್‍ನಲ್ಲಿ ಹೋಗುತ್ತಿದ್ದ ನಾಲ್ವರ ಪೈಕಿ ಮಧು ಸಾವನ್ನಪ್ಪಿದ್ದಾನೆ. ಆಲತ್ತೂರು ಗ್ರಾಮದ ಮಣಿ ಹಾಗೂ ವೆಂಕಟೇಶ್ ಗಾಯಗೊಂಡವರು. ಗಾಯಾಳುಗಳು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುಂಡ್ಲುಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಜೀಪ್‍ಗೆ ರಸ್ತೆ ತಿರುವಿನಲ್ಲಿ ವೇಗವಾಗಿ ಬಂದ ಪಲ್ಸರ್ ಬೈಕ್ ನಿಯಂತ್ರಣ ತಪ್ಪಿ ಜೀಪ್‍ಗೆ ಡಿಕ್ಕಿಯಾಗಿದೆ. ಜೀಪ್ನಲ್ಲಿದ್ದ ಇಬ್ಬರಿಗು ಗಾಯಗಳಾಗಿವೆ. ಕೇರಳ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.