ಶಿವಮೊಗ್ಗ: ಬೈಕ್ ಚಲಾಯಿಸುವಾಗ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಬ್ಲಾಸ್ಟ್ ಆಗಿ, ಬೈಕ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸೊರಬದಲ್ಲಿ ನಡೆದಿದೆ.
ಸೊರಬ ತಾಲೂಕು ಕುಪ್ಪಗುಡ್ಡೆ ಗ್ರಾಮದ ಕೆರೆ ಬಳಿ ಘಟನೆ ನಡೆದಿದ್ದು, ತವನಂದಿ ಗ್ರಾಮದ ಶರತ್ (22) ಗಾಯಗೊಂಡ ಯುವಕ. ಶರತ್ ಮತ್ತವನ ಸ್ನೇಹಿತ ತವನಂದಿ ಗ್ರಾಮದಿಂದ ಕುಪ್ಪಗುಡ್ಡೆಗೆ ಹೋಗುವಾಗ ಕೆರೆಯ ಬಳಿ ಮೊಬೈಲ್ ಸ್ಫೋಟಗೊಂಡಿದೆ.
ಇದರಿಂದ ಯುವಕರು ಗಾಬರಿಯಲ್ಲಿ ನಿಯಂತ್ರಣ ಕಳೆದುಕೊಂಡು ಕೆರೆಗೆ ಬಿದ್ದಿದ್ದಾರೆ. ತಕ್ಷಣ ಹಿಂಬದಿ ಬೈಕ್ ಸವಾರ ಶರತ್‍ನನ್ನು ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶರತ್‍ನ ಬಲ ತೂಡೆಗೆ ಗಾಯವಾಗಿದೆ. ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.