ಉಡುಪಿ: ಬಹುನಿರೀಕ್ಷಿತ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ರಿಸಲ್ಟ್ ಅನೌನ್ಸ್ ಮಾಡಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಸುರಭಿ ಶೆಟ್ಟಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದ್ದಾಳೆ. ಕಿರಿಮಂಜೇಶ್ವರದ ಸಾಂದೀಪನಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುರಭಿ ಶೆಟ್ಟಿ 625ಕ್ಕೆ 624 ಅಂಕಗಳನ್ನು ಸುರಭಿ ಪಡೆದಿದ್ದಾಳೆ.
6 ಮಂದಿಗೆ 625 ಅಂಕ – ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ https://t.co/97ZgUC81L8#Karnataka #SSCL #sslcresult2020 #sslcresultkarnataka2020 #Education #Corona #Covid19
— PublicTV (@publictvnews) August 10, 2020
Advertisement
ಫಲಿತಾಂಶ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸುರಭಿ, 624 ಅಂಕ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಸಮಾಜ ವಿಜ್ಞಾನದಲ್ಲಿ 1 ಅಂಕ ಕಳೆದುಕೊಂಡಿದ್ದೇನೆ. ನನಗೆ ಫುಲ್ ಮಾರ್ಕ್ ಬರುವ ನಂಬಿಕೆ ಇತ್ತು. ಮರು ಮೌಲ್ಯಮಾಪನಾ ಅರ್ಜಿ ಹಾಕುತ್ತೇನೆ. ನನ್ನ ತಂದೆತಾಯಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಲಾಕ್‍ಡೌನ್ ಸಮಯದಲ್ಲಿ ಮೂರು ತಿಂಗಳು ಏಕಾಗ್ರತೆಯಿಂದ ಓದಲು ಬಹಳ ಕಷ್ಟವಾಯಿತು ಎಂದಿದ್ದಾಳೆ.
Advertisement
ಎಸ್‌ಎಸ್‌ಎಲ್‌ಸಿ ರಿಸಲ್ಟ್: 6 ಮಂದಿಗೆ 625/625 ಅಂಕ.. ಚಿಕ್ಕಬಳ್ಳಾಪುರ ಪ್ರಥಮ.. ಜಿಲ್ಲಾವಾರು ವಿವರ ನೋಡಿ https://t.co/B1PE0YUFxH#SSLC #Education #Corona #Covid19 #Karnataka #sslcresult2020 @nimmasuresh
— PublicTV (@publictvnews) August 10, 2020
Advertisement
ಪೋಷಕರ ಸಹಕಾರ ಬಹಳ ಮುಖ್ಯವಾಗಿದೆ. ನನ್ನ ಶಾಲೆಯ ಎಲ್ಲಾ ಟೀಚರ್ ಗಳಿಗೆ ಕೃತಜ್ಞತೆಗಳು. ನನಗೆ ನನ್ನ ಮೇಲೆ ನಿರೀಕ್ಷೆ ಇರಲಿಲ್ಲ. ನನ್ನ ಶಿಕ್ಷಕರಿಗೆ ನನ್ನ ಮೇಲೆ ಬಹಳ ನಿರೀಕ್ಷೆ ಇತ್ತು. ಅವರ ನಿರೀಕ್ಷೆ ನಿಜ ಆಗಿದೆ. ಗೆಳತಿಯರ ಜೊತೆ ನಡೆದ ಗ್ರೂಪ್ ಸ್ಟಡಿಯಿಂದ ಇಷ್ಟು ಅಂಕ ಬರಲು ಸಾಧ್ಯವಾಯಿತು ಎಂದು ಹೇಳಿದ್ದಾಳೆ.
Advertisement