ಬೇಸಿಗೆಯ ಬಿಸಿಲಿಗೆ ಚರ್ಮದ ಕಾಂತಿ ರಕ್ಷಣೆ ಮಾಡೋದು ಹೇಗೆ?

skin care

ಮಹಿಳೆಯರು ಸೌಂದರ್ಯ ಪ್ರಿಯರು. ತಮ್ಮ ಸೌಂದರ್ಯದ ಕುರಿತಾಗಿ ಕಾಳಜಿಯನ್ನು ವಹಿಸುತ್ತಾರೆ. ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ಚರ್ಮ ಬಣ್ಣವು ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಇಂತಹ ಸಮಸ್ಯೆಗೆ ಕೆಲವು ಮನೆ ಮನೆಮದ್ದು ಮತ್ತು ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಬಹುದಾಗಿದೆ.

* ಬಿಸಿಲಿನಲ್ಲಿ ಹೊರಗಡೆ ಸುತ್ತಾಡಿ ಬಂದಿದ್ದೀರಾ ಎಂದಾದರೆ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ತ್ವಚೆಯ ತಾಪಮಾನ ಕುಗ್ಗುವುದರಿಂದ ತ್ವಚೆ ಕಪ್ಪಾಗುವುದನ್ನು ತಪ್ಪಿಸಬಹುದಾಗಿದೆ.

skin care2

* ಬಿಸಿಲಿನಲ್ಲಿ ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ, ಪ್ರತಿ 2 ಗಂಟೆಗಳಿಗೊಮ್ಮೆ ಮಾರುಕಟ್ಟೆಯಲ್ಲಿ ಸಿಗುವ ಸನ್‍ಸ್ಕ್ರೀನ್ ಲೋಶನ್ ಚರ್ಮಗಳಿಗೆ ಹಚ್ಚ ಬಹುದಾಗಿದೆ.

* ಬಿಸಿಲು ಮುಖಕ್ಕೆ ತಾಗದಂತೆ ಹ್ಯಾಟ್ ಹಾಕಿ, ಸ್ಟಾಲ್ ಉಪಯೋಗಿಸಿ, ಬಿಸಿಲಿನಲ್ಲಿ ಚಲಿಸುವಾಗ ಕೊಡೆ ಬಳಸಿ ಸೂರ್ಯನ ಪ್ರಖರ ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಬಹುದು.

skin care9

* ಬೇಸಿಗೆ ಕಾಲದಲ್ಲಿ ದೇಹ ತ್ವಚೆ ಡ್ರೈ ಆಗುತ್ತಿರುತ್ತದೆ. ವಿಟಮಿನ್‍ಗಳನ್ನು ಹೊಂದಿರುವ ಹಣ್ಣು ಹಂಪಲುಗಳು, ಹಣ್ಣಿನ ರಸವನ್ನು ಸೇವಿಸಿ ದೇಹವನ್ನು ತಂಪಾಗಿರಿಸುವ ಮೂಲಕವೂ ಚರ್ಮದ ಕಾಂತಿಯನ್ನು ಕಾಪಾಡಬಹುದಾಗಿದೆ.

skin care3

* ಸಹಜವಾಗಿಯೇ ಬೇಸಿಗೆಯಲ್ಲಿ ಹೆಚ್ಚು ಬೆವರುತ್ತೇವೆ. ಆದ್ದರಿಂದ ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಹೀಗಾಗಿ ಕನಿಷ್ಠ ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಒಳ್ಳೆಯದು.

* ನಿಂಬೆ ರಸಕ್ಕೆ ಮೊಸರು ಅಥವಾ ಸ್ವಲ್ಪ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ಮುಖ ತೊಳೆದರೆ ಫ್ರೆಶ್ ಅನ್ನಿಸುತ್ತದೆ.

skin care6
* ಬೇಸಿಗೆಯಲ್ಲಿ ತಣ್ಣಿರಿನಿಂದ ಮುಖ ತೊಳೆಯಿರಿ. ಮೆತ್ತನೆಯ ಬಟ್ಟೆಯಿಂದ ಮುಖ ಒರೆಸಿ, ರೋಸ್ ವಾಟರ್ ಹಚ್ಚಬಹುದಾಗಿದೆ.

* ಮೊಸರಿನ ಜೊತೆ ಕಡ್ಲೆಹಿಟ್ಟು ಅಥವಾ ಅರಿಶಿಣ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಇಮ್ಮಡಿಯಾಗುತ್ತದೆ.

skin care5

* ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಧೂಳು ಮುಖ ಮತ್ತು ಶರೀರದ ಮೇಲೆ ಕೂರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯಿರಿ. ಬಿಸಿಲಿಗೆ ಕಪ್ಪು ಚುಕ್ಕೆ, ತುರಿಕೆ, ನವೆ ಉಂಟಾದರೆ ಮೊಸರು, ಟೊಮ್ಯಾಟೊ, ಲಿಂಬೆಹಣ್ಣಿನ ಜ್ಯೂಸ್ ಹಚ್ಚಬಹುದು.

Comments

Leave a Reply

Your email address will not be published. Required fields are marked *