ಬೇಸಿಗೆಯ ಬಿಸಿಲಿಗೆ ತಂಪಾಗಿರುವ ಆಹಾರವನ್ನು ನಾವು ಹೆಚ್ಚಾಗಿ ತಿನ್ನಲು ಬಯಸುತ್ತೇವೆ. ದೇಹವನ್ನು ತಂಪಾಗಿಸಲು ಅನೇಕ ಪಾನಿಯಗಳ ಮೋರೆ ಹೋಗುತ್ತೇವೆ. ವೀಕೆಂಡ್‍ನಲ್ಲಿ ಏನು ಸಾರು ಮಾಡುವುದು ಎಂದು ಯೋಚಿಸುವ ನೀವು ಮಜ್ಜಿಗೆ ಸಾರು ಮಾಡಿ ಒಂದೆರಡು ತುತ್ತು ಊಟ ಜಾಸ್ತಿ ಸೇರುತ್ತೆ. ಸುಲಭವಾಗಿ ಮಾಡುವ ರುಚಿಯಾದ ಮಜ್ಜಿಗೆ ಸಾರು ಮಾಡುವ ವಿಧಾನ.
Advertisement
ಬೇಕಾಗುವ ಸಾಮಗ್ರಿಗಳು:
* ಮೊಸರು- 2 ಕಪ್
* ಇರುಳ್ಳಿ- 1
* ಶುಂಠಿ- 1 ಇಂಚು
* ಹಸಿಮೆಣಸಿನಕಾಯಿ- 2
* ಸಾಸಿವೆ- 1 ಟೀ ಸ್ಪೂನ್
* ಜಿರೀಗೆ- 1 ಟೀ ಸ್ಪೂನ್
* ಉದ್ದಿನಬೇಳೆ- 1 ಟೀ ಸ್ಪೂನ್
* ಕಡ್ಲೆಬೇಳೆ- 1 ಟೀ ಸ್ಪೂನ್
* ಬೆಳ್ಳುಳ್ಳಿ- 1
* ಒಣಮೆಣಸು- 2
* ಕರಿಬೇವು- 4 ರಿಂದ5
* ಅರಿಶಿಣ- ಅರ್ಧ ಸ್ಪೂನ್
* ಕೊತ್ತಂಬರಿ ಸೊಪ್ಪು
* ರುಚುಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಒಂದು ಪಾತ್ರೆಗೆ ಒಂದು ಕಪ್ ಮೊಸರು ಹಾಕಿ ಚೆನ್ನಾಗಿ ಕಡೆದುಕೊಳ್ಳಬೇಕು.
* ನಂತರ ಒಂದು ಮಿಕ್ಸಿ ಜಾರಿಗೆ ಇರುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಬೇಕು.
* ಒಂದು ತವಾಗೆ ಸಾಸಿವೆ, ಜಿರೀಗೆ, ಉದ್ದಿನಬೇಳೆ, ಕಡ್ಲೆಬೇಳೆ, ಬೆಳ್ಳುಳ್ಳಿ, ಒಣಮೆಣಸು, ಕರಿಬೇವು, ಅರಿಶಿಣ ಹಾಕಿ ಚೆನ್ನಾಗಿ ಪ್ರೈ ಮಾಡಬೇಕು.
Advertisement
* ಮಿಕ್ಸಿಯಲ್ಲಿ ರುಬ್ಬಿಟ್ಟಿದ್ದ ಮಸಾಲೆಯನ್ನು ಈ ಒಗ್ಗರಣೆಗೆ ಸೇರಿಸಿ ಚೆನ್ನಾಗಿ ಬೇಯಿಸಿ ನಂತರ ಮಜ್ಜಿಗೆಗೆ ಹಾಕಬೇಕು.
* ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕೊತ್ತಂಬರಿಯನ್ನು ಹಾಕಿದರೆ ರುಚಿಯಾದ ತಂಪದ ಮಜ್ಜಿಗೆ ಸಾರು ಸವಿಯಲು ಸಿದ್ಧವಾಗುತ್ತದೆ.