ಬೆಳ್ಳಂಬೆಳಗ್ಗೆ ಸರಗಳ್ಳರನ್ನು ಹಿಡಿದ ಪೊಲೀಸರ ತಂಡಕ್ಕೆ 25 ಸಾವಿರ ಬಹುಮಾನ

Public TV
1 Min Read
kamal pant 2

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಇಸ್ಕಾನ್ ದೇವಸ್ಥಾನದ ಬಳಿ ಸರಗಳ್ಳರ ಕಾಲಿಗೆ ಗುಂಡೇಟು ನೀಡಿ ವಶಕ್ಕೆ ಪಡೆದ ಪೊಲೀಸರ ತಂಡವನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶ್ಲಾಘಿಸಿದ್ದಾರೆ. ಅಲ್ಲದೆ ತಂಡಕ್ಕೆ ನಗದು ಬಹುಮಾನವನ್ನು ನೀಡಲಾಗಿದೆ.

BNG copy

ಈ ಸಂಬಂಧ ಟ್ವೀಟ್ ಮಾಡಿರುವ ಕಮಲ್ ಪಂತ್, ಮುಂಜಾನೆಯ ಕಾರ್ಯಾಚರಣೆಯಲ್ಲಿ ಮಹಾಲಕ್ಷ್ಮಿ ಲೇ ಔಟ್ ಬಿಸಿಪಿ ಸರಹದ್ದಿನಲ್ಲಿ ಸರಗಳ್ಳತನ ಪ್ರಕರಣಗಳಲ್ಲಿನ ಇಬ್ಬರು ಆರೋಪಿಗಳು ತಪ್ಪಿಸಿಕೊಳ್ಳಲೆತ್ನಿಸಿದಾಗ, ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದು, ತಮ್ಮ ಆತ್ಮರಕ್ಷಣೆಗೋಸ್ಕರ ರಾಜಾಜಿನಗರ ಬಿಸಿಪಿ ತಂಡವು ಕಾನೂನು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆ. ತಂಡಕ್ಕೆ 25,000 ಬಹುಮಾನ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಘಟನೆ ಏನು..?
ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಂದ ಇಬ್ಬರು ಕಳ್ಳರು ಸರಗಳವು ಮಾಡಿ ಎಸ್ಕೇಪ್ ಆಗುತ್ತಿದ್ದರು. ಈ ವಿಚಾರ ತಿಳಿದ ಪೊಲೀಸರು ಆರೋಪಿಗಳ ಬೈಕ್ ಚೇಸ್ ಮಾಡಿದ್ದಾರೆ. ಇಸ್ಕಾನ್ ದೇವಸ್ಥಾನದ ಬಳಿ ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ರಾಜಾಜಿನಗರ ಇನ್ಸ್‍ಪೆಕ್ಟರ್ ವೆಂಕಟೇಶ್, ಇಬ್ಬರು ಸರಗಳ್ಳರ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.

BNG 1

Share This Article
Leave a Comment

Leave a Reply

Your email address will not be published. Required fields are marked *