ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ತನ್ನ ರೌದ್ರನರ್ತನ ತೋರುತ್ತಿದ್ದು, ಇಂದಿನಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಹೇರಲಾಗಿದೆ.
ಆರು ಗಂಟೆಯಿಂದ ಹತ್ತು ಗಂಟೆ ತನಕ ಅಗತ್ಯ ವಸ್ತುಗಳ ಜೊತೆಗೆ ಮದ್ಯ ಖರೀದಿಗೂ ಚಾನ್ಸ್ ನೀಡಲಾಗಿದೆ. ಮದ್ಯ ಮಾರಾಟ, ಅಂಗಡಿ ಮುಂಗಟ್ಟುಗಳು ಓಪನ್, ದಿನಸಿ ತರಕಾರಿ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಆದರೆ ಇಂದು ಬೆಳ್ಳಂಬೆಳಗ್ಗೆ ಬಾರ್ ಗಳನ್ನು ಓಪನ್ ಮಾಡಲಾಗಿದೆ.
Advertisement
Advertisement
ಜನತಾ ಕಫ್ರ್ಯೂ ಹೇರಿದ್ದರಿಂದ ಮದ್ಯ ಪ್ರಿಯರು ಬಾರ್ ಗಳ ಕಡೆ ಮುಖ ಮಾಡಿದ್ದಾರೆ. ಜಿಲ್ಲೆಗಳಲ್ಲಿಯೂ ಬೆಳ್ಳಂಬೆಳಗ್ಗೆ ಬಾರ್, ರೆಸ್ಟೋರೆಂಟ್, ಎಮ್‍ಆರ್ ಪಿ ಗಳನ್ನು ಓಪನ್ ಮಾಡಲಾಗಿದ್ದು, ಜನ ಖರೀದಿ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ.
Advertisement
ಮಂಗಳವಾರ ರಾತ್ರಿಯಿಂದ ಇಡೀ ಕರ್ನಾಟಕ ಲಾಕ್ ಆಗಲಿದೆ. ಕಳೆದ ವಾರದಿಂದ ರಾಜ್ಯದಲ್ಲಿ ನೈಟ್ ಕರ್ಪ್ಯೂ, ವೀಕೆಂಡ್ ಲಾಕ್‍ಡೌನ್ ಜಾರಿಯಲ್ಲಿದೆ. ಆದ್ರೂ ಕೊರೊನಾ ಸಾವು ನೋವು ಕಂಟ್ರೋಲ್‍ಗೆ ಬರುತ್ತಿಲ್ಲ. ಬದಲಿಗೆ ಅಪಾಯದ ಮಟ್ಟವನ್ನು ಮೀರುತ್ತಿದೆ. ದೆಹಲಿ, ಮಹಾರಾಷ್ಟ್ರಕ್ಕಿಂತಲೂ ಘನಘೋರ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗುವ ಸ್ಥಿತಿ ಎದುರಾಗಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕಾಗಿ ಇಡೀ ರಾಜ್ಯದಲ್ಲಿ 16 ದಿನಗಳ ಕಾಲ ಕಠಿಣ ಜನತಾ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
Advertisement
ಮಂಗಳವಾರ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಗ್ಗೆ 6 ಗಂಟೆಯವರೆಗೂ ಕಂಪ್ಲೀಟ್ ಲಾಕ್‍ಡೌನ್ ಮಾದರಿಯ ಕ್ರಮಗಳು ಜನತಾ ಕರ್ಫ್ಯೂ ರೂಪದಲ್ಲಿ ಜಾರಿಯಲ್ಲಿ ಇರಲಿವೆ. ಮೇ 12ರ ಹೊತ್ತಿಗೂ ಸೋಂಕು ಕಂಟ್ರೋಲ್‍ಗೆ ಬರಲಿಲ್ಲ ಅಂದರೆ ಇದೇ ರೀತಿಯ ಕ್ರಮಗಳನ್ನು ಮುಂದುವರೆಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು.