ನೆಲಮಂಗಲ: ಶುಕ್ರವಾರ ಸುರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಅಮಾನಿಕೆರೆ ಹಾಗೂ ಬಿನ್ನಮಂಗಲ ಕೆರೆ ಭರ್ತಿಯಾಗಿದೆ. ಕೆರೆಯಲ್ಲಿ ಭಾರೀ ನೊರೆ ಕಂಡಿದೆ.
ಗ್ರಾಮೀಣ ಭಾಗಗಳಲ್ಲೂ ಕಾಣಿಸಿಕೊಳ್ಳುತ್ತಿರುವ ನೊರೆಯಿಂದ ಪರಿಸರ ಪ್ರೇಮಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ರಾತ್ರಿ ಸುರಿದ ಮಳೆಗೆ ತುಂಬಿ ಹರಿದಿದೆ. ಎರಡು ಕೆರೆಯ ಕೋಡಿಯಲ್ಲಿ ನೊರೆ ಉದ್ಭವವಾಗಿ ಹರಿಯುತ್ತಿದೆ. ಕಲುಷಿತಗೊಂಡ ನೀರಿನಿಂದ ನೊರೆಯೊಂದಿಗೆ ನೀರಿನ ಹರಿವು, ಕಲುಷಿತ ಕಾಣುತ್ತಿದೆ.
Advertisement
Advertisement
ಗಾಳಿಯಲ್ಲಿ ತೇಲುತ್ತಿರುವ ನೊರೆಯಿಂದಾಗಿ ಅಕ್ಕಪಕ್ಕದ ಜನರಲ್ಲಿ ಆತಂಕ ಉಂಟಾಗಿರುವುದಲ್ಲದೆ, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸಹಜವಾಗಿಯೇ ಸ್ಬಲ್ಪ ಮಳೆಯಾದರೂ ಬೆಂಗಳೂರು ನಗರದ ಬೆಳ್ಳಂದೂರು ಕೆರೆ ಕಾಣಿಸಿಕೊಳ್ಳುತ್ತಿದ್ದ ನೊರೆ, ಇದೀಗ ನೆಲಮಂಗದಲ್ಲೂ ನೊರೆ ಪ್ರತ್ಯಕ್ಷವಾಗಿದೆ.
Advertisement
ಕೆರೆ ಮಲೀನವಾದಾಗ ಈ ರೀತಿ ನೊರೆ ಉಂಟಾಗುತ್ತದೆ ಎಂದು ವಿಜ್ಞಾನಿಗಳು, ಪರಿಸರ ತಜ್ಞರು ಹೇಳುತ್ತಾರೆ, ನೆಲಮಂಗಲ ಅಮಾನಿಕೆರೆಯು ಮಲೀನವಾಯ್ತಾ ಎಂಬ ಆತಂಕಕ್ಕೆ ಕಾರಣವಾಗುದೆ.