ವಿಜಯಪುರ: ರೈತರೊಬ್ಬರು ತಮ್ಮ ಜಮೀನಿನಲ್ಲಿ ಬೆಳೆಗಳ ಮಧ್ಯೆ ಬೆಳೆದಿದ್ದ 53 ಸಾವಿರ ರೂಪಾಯಿ ಮೌಲ್ಯದ ಅಕ್ರಮ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ರಾಮು ಗಗನಮಾಲಿ ಎಂಬ ರೈತರೊಬ್ಬರು ತಮ್ಮ ಹೊಲದಲ್ಲಿ ಬೆಳೆಗಳ ಮಧ್ಯೆ ಹಸಿ ಗಾಂಜಾ ಬೆಳೆದಿದ್ದರು. ಈ ಕುರಿತು ಮಾಹಿತಿ ಕಲೆ ಹಾಕಿದ ಅಬಕಾರಿ ಅಪರ ಆಯುಕ್ತ ಡಾ. ಮಂಜುನಾಥ್ ನೇತೃತ್ವದಲ್ಲಿ ಅಬಕಾರಿ ಜಂಟಿ ಆಯುಕ್ತೆ ಸೈಯಿದಾ ಆಫ್ರಿನಾ ತಂಡ ದಾಳಿ ನಡೆಸಿ ಹೊಲದಲ್ಲಿ ಬೆಳೆದಿದ್ದ 315 ಹಸಿ ಗಾಂಜಾ ಗಿಡಗಳನ್ನು ಹಾಗೂ 3ಕೆಜಿ ಒಣಗಿದ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.
ವಿಜಯಪುರ ಅಬಕಾರಿ ಪೊಲೀಸರು ದಾಳಿ ಮಾಡುತ್ತಿದ್ದಂತೆ. ಜಮೀನಿನ ಮಾಲೀಕ ರಾಮು ಗಗನಮಾಲಿ ಪರಾರಿಯಾಗಿದ್ದಾರೆ. ಸ್ಥಳದಿಂದ 53 ಸಾವಿರ ರೂ. ಮೌಲ್ಯದ 53 ಕೆಜಿ ಗಾಂಜಾ ವಶಪಡಿಸಿಕೊಂಡು, ಆರೋಪಿ ವಿರುದ್ಧ ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.