– ಮುಂಗಾರು ಚುರುಕು ಹಿನ್ನೆಲೆ ಕ್ರಮ
ಬೆಂಗಳೂರು: ಕೇರಳಕ್ಕೆ ನಾಳೆ ಮಾನ್ಸೂನ್ ಮಾರುತಗಳು ಪ್ರವೇಶಿಸಲಿದ್ದು, ಈ ಹಿನ್ನೆಲೆ ಭಾರೀ ಮಳೆಯಾಗುತ್ತಿದೆ. ರಾಜ್ಯದಲ್ಲಿ ಸಹ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಮುಂಗಾರು ಹಂಗಾಮಿಗೆ ರೈತರು ಭರ್ಜರಿ ಸಿದ್ಧತೆ ನಡೆಸಿದ್ದು, ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಅಂಗಡಿಗಳ ಮುಂದೆರ ಸಾಲು ಹೆಚ್ಚುತ್ತಿದೆ. ಉದನ್ನು ಮನಗಂಡ ಸರ್ಕಾರ ರಸಗೊಬ್ಬರ ಸಾಗಣೆ ಹಾಗೂ ಮಾರಾಟಕ್ಕೆ ಅನುಮತಿ ನೀಡಿದೆ.
ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಬೆ. 6 ರಿಂದ ಸಂಜೆ 6 ಗಂಟೆಯವರೆಗೆ ರಸಗೊಬ್ಬರ ಸಾಗಾಟ, ಮಾರಾಟಕ್ಕೆ ಅನುಮತಿ ನೀಡಿದೆ. ಇದರಿಂದಾಗಿ ರೈತರು ಬೆಳಗ್ಗೆ ಬೇಗ ತೆರಳಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದು ತಪ್ಪಿದಂತಾಗುತ್ತದೆ. ಇದನ್ನೂ ಓದಿ: ಮುಂಗಾರು ಆರಂಭ- ಬೀಜ, ಗೊಬ್ಬರ ಖರೀದಿಗೆ ಮುಗಿಬಿದ್ದ ರೈತರು
ಮತ್ತೊಂದು ಮಹತ್ವದ ಘೋಷಣೆ ಮಾಡಿರುವ ಸರ್ಕಾರ, ರಫ್ತು ವಲಯದ ಕೈಗಾರಿಕೆಗಳು ಹಾಗೂ ಗಾರ್ಮೆಂಟ್ಸ್ ಗಳ ಕಾರ್ಯಾಚರಣೆಗೆ ಷರತ್ತುಬದ್ಧ ಅನುಮತಿ ನೀಡಿದೆ. ಶೇ.50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಸಮ್ಮತಿಸಿದೆ. 1,000 ಕಾರ್ಮಿಕರ ಮೇಲಿರುವ ಕೈಗಾರಿಕೆಗಳಲ್ಲಿ ಶೇ.10ರಷ್ಟು ಕಾರ್ಮಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯವಾಗಿದ್ದು, ವಾರಕ್ಕೆ ಎರಡು ಬಾರಿ ಟೆಸ್ಟ್ ಮಾಡಬೇಕು ಎಂದು ಷರತ್ತುಬದ್ಧ ಅನುಮತಿ ನೀಡಿದೆ.