ಹಾವೇರಿ: ಕೊರೊನಾ ಸೋಂಕು ದೃಢಪಟ್ಟಿದ್ದ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸಲು ಆರೋಗ್ಯ ಇಲಾಖೆ ನಿರ್ಲಕ್ಷ್ಯ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆರೇಗೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅರವತ್ತು ವರ್ಷದ ಸೋಂಕಿತೆ ವೃದ್ಧೆಯ ಪುತ್ರ ಬೆಳಗ್ಗೆ ಹತ್ತು ಗಂಟೆಗೆ ಸೋಂಕು ದೃಢಪಟ್ಟ ಮಾಹಿತಿ ನೀಡಿದ್ರೂ ರಾತ್ರಿ ಹನ್ನೊಂದು ಗಂಟೆಗೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಹಾನಗಲ್ ತಾಲೂಕಿನ ಆರೋಗ್ಯ ಇಲಾಖೆ ಅಧಿಕಾರಿ ವಿರುದ್ಧ ಸೋಂಕಿತನ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಬೆಳಗ್ಗೆಯಿಂದ ಫೋನ್ ಮಾಡಿದ್ರೆ ಅಂಬ್ಯುಲೆನ್ಸ್ ಇಲ್ಲ, ಬರುತ್ತೆ ಬರುತ್ತೆ, ಡಿಎಚ್‍ಓ ಕಳಿಸ್ತಾರೆ ಅಂತಾ ಸಬೂಬು ಹೇಳಿದ್ದಾರೆ. ಡಿಎಚ್‍ಓ ಅಂಬ್ಯುಲೆನ್ಸ್ ಕಳಿಸಿಲ್ಲ, ಬೆಡ್ ಖಾಲಿ ಇರ್ಲಿಲ್ಲ, ಈಗ ಬೆಡ್ ಖಾಲಿ ಆಗಿವೆ ಅಂತಾ ಸಬೂಬು ಹೇಳಿ ಸಮಯವನ್ನ ಕಳೆದಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರಗೌಡ ಪಾಟೀಲ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸೋಂಕಿತೆಯನ್ನ ಸಾಗಿಸಲು ಇಷ್ಟೊಂದು ತಡಮಾಡಿದ್ರೆ ನಮ್ಮನ್ನ ಹೋಂ ಕ್ವಾರಂಟೈನ್ ನಲ್ಲಿ ಇಟ್ಟುಬಿಡಿ ಎಂದು ಅಧಿಕಾರಿ ವಿರುದ್ಧ ವೃದ್ಧೆಯ ಪುತ್ರ ಆಕ್ರೋಶ ಹೊರಹಾಕಿದ್ದಾರೆ.