ಬೆಳಗಾವಿ: ಮಹಾರಾಷ್ಟ್ರದಿಂದ ಅಕ್ರಮವಾಗಿ ಬೆಳಗಾವಿ ಗಡಿ ಪ್ರವೇಶಿಸಿದ 19 ಮಂದಿ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ಠಾಣೆಯಲ್ಲಿ ಈ 19 ಜನರ ವಿರುದ್ಧ ಕೇಸ್ ದಾಖಲಾಗಿದೆ.
ಲಾಕ್‍ಡೌನ್ ಮುನ್ನ ಕಬ್ಬು ಕಟಾವು ಮಾಡಲು ಕೊಲ್ಲಾಪುರಕ್ಕೆ ತೆರಳಿದ್ದು, ಆ ಬಳಿಕ ಲಾಕ್ ಡೌನ್ ನಿಂದಾಗಿ ಕೆಲಸ ಇಲ್ಲದೇ ಕೂಲಿಕಾರ್ಮಿಕರು ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲಿಯೇ ಮಹಾರಾಷ್ಟ್ರದ ಮೀರಜ್ ಗಡಿಯವರೆಗೆ ಆಗಮಿಸಿದ್ರು.
Advertisement
Advertisement
ದಾಸಗಾಂವ – ಮಾಗಾಂವ – ಮೀರಜ್ ಮೂಲಕ ಕಳ್ಳದಾರಿಯಲ್ಲಿ ಗಡಿ ಪ್ರವೇಶಿಸಿ ಚೆಕ್‍ಪೋಸ್ಟ್ ಪಕ್ಕದ ಗದ್ದೆಗಳ ಮೂಲಕ ಬೆಳಗಾವಿ ಗಡಿ ಪ್ರವೇಶಿಸಿದ್ದರು. ಆ ನಂತರ ತಮ್ಮ ಪರಿಚಯಸ್ಥರಿಗೆ ಹೇಳಿ ಲಾರಿ ಬುಕ್ ಮಾಡಿದ್ದರು. ಹೀಗೆ ಗಡಿಯಿಂದ ಲಾರಿ ಮೂಲಕ ಮೂಡಲಗಿಗೆ ಆಗಮಿಸುತ್ತಿದ್ದಾಗ ಅವರನ್ನು ತಡೆಹಿಡಿಯಲಾಗಿದೆ.
Advertisement
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ತಡೆದ ಮೂಡಲಗಿ ಪೊಲೀಸರು ಬಳಿಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಎಲ್ಲರ ಆರೋಗ್ಯ ತಪಾಸಣೆಗೆ ಕಳುಹಿಸಿದ್ದಾರೆ. ಆರೋಗ್ಯ ತಪಾಸಣೆ ಮಾಡಿ ಒಟ್ಟು 33 ಜನರನ್ನು ಯಾದವಾಡ ಗ್ರಾಮದ ಹೊರವಲಯದ ಹಾಸ್ಟೆಲ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.