ಬೆಳಗಾವಿ: ಕೊರೊನಾ ಲಸಿಕೆ ಪಡೆದು ಜಿಲ್ಲೆಯಲ್ಲಿ 18 ಜರಿಗೆ ಸಾಧಾರಣ ಜ್ವರ ಮತ್ತು ಮೈಕೈ ನೋವು ಕಂಡುಬಂದಿದೆ. ಆದರೆ ಲಸಿಕೆ ಪಡೆದಾಗ ಇವೆಲ್ಲ ಸಹಜ ಯಾರೂ ಹೆದರುವ ಅಗತ್ಯವಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಜಿಲ್ಲೆಯಲ್ಲಿ ಈ ವರೆಗೆ ಮೂರು 3,500 ಜನ ಲಸಿಕೆ ಪಡೆದಿದ್ದು, ಒಟ್ಟು 35,960 ಜನರಿಗೆ ಲಸಿಕೆ ನೀಡಬೇಕಾಗಿದೆ. ಲಸಿಕೆ ಪಡೆದ ಕರೊನಾ ವಾರಿಯರ್ಸ್ ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾರೆ. ಮುಂದಿನ ದಿನಗಳಲ್ಲಿ ಲಸಿಕೆ ಪಡೆಯುವ ಫಲಾನುಭವಿಗಳ ಪಟ್ಟಿ ದುಪ್ಪಟ್ಟು ಆಗಲಿದೆ ಎಂದು ಜಿಲ್ಲಾ ಲಸಿಕಾಧಿಕಾರಿ ಡಾ.ಗಡಾದ ತಿಳಿಸಿದ್ದಾರೆ.
Advertisement
ಕೊವಿಶೀಲ್ಡ್ ಲಸಿಕೆಯನ್ನು ಪಡೆದ ಕೆಲವರಿಗೆ ಆರೋಗ್ಯ ತೊಂದರೆಯಾಗುತ್ತಿದೆ ಎಂದು ಗಾಳಿ ಸುದ್ದಿ ಹರಡುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡಬಾರದು. ವ್ಯಾಕ್ಸಿನ್ ಪಡೆದಾಗ ಕೆಲವು ಸಣ್ಣಪುಟ್ಟ ಜ್ವರ ಹಾಗೂ ಮೈಕೈನೋವು ಸಹಜವಾಗಿರುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳ ಅಧಿಕಾರಿಗಳು ಹಾಗೂ ಲಸಿಕಾ ಸಿಬ್ಬಂದಿ ಜೊತೆ ನಿರಂತರ ಸಂಪರ್ಕ ಸಾಧಿಸಲಾಗುತ್ತಿದೆ.
Advertisement
Advertisement
ಆನ್‍ಲೈನ್ ಮೂಲಕ ಜಿಲ್ಲಾ ಲಸಿಕಾಧಿಕಾರಿಗಳ ಜೊತೆ ವಿಡಿಯೋ ಸಂವಾದ ಆರಂಭವಾಗಿದೆ. ಪ್ರತಿ ತಾಲೂಕಿನಿಂದ ಎಲ್ಲ ಲಸಿಕಾ ಸಿಬ್ಬಂದಿ ಮುಖ್ಯಸ್ಥರ ಜೊತೆ ಜಿಲ್ಲಾ ಲಸಿಕಾಧಿಕಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಲಸಿಕೆ ಪಡೆದವರಿಗೆ ಯಾರಿಗಾದರೂ ರಿಯಾಕ್ಷನ್ ಆರಂಭವಾದರೆ ತಕ್ಷಣ ಚಿಕಿತ್ಸೆ ನೀಡುವ ತಂಡ 24 ಗಂಟೆ ಕಾರ್ಯಗತವಾಗುತ್ತದೆ.