ಬೆಂಗಳೂರು: ಬೆಲ್ ಬಾಟಂ 2 ಚಿತ್ರದ ಮುಹೂರ್ತದಲ್ಲಿ ಪುನೀತ್ ರಾಜ್‍ಕುಮಾರ್ ಭಾಗಿಯಾಗಿ ಕ್ಲ್ಯಾಪ್‍ಮಾಡಿ ಶುಭಹಾರೈಸಿರುವ ಫೋಟೋಗಳನ್ನು ರಿಷಭ್ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆಲ್ ಬಾಟಮ್ 2 ಚಿತ್ರದ ಮುಹೂರ್ತ ಇಂದು ಬನಶಂಕರಿಯ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಜರುಗಿತು. ಈ ಸಂದರ್ಭದಲ್ಲಿ ನಮ್ಮ ಜೊತೆಗಿದ್ದು ಬೆನ್ನು ತಟ್ಟಿದ ಪ್ರೀತಿಯ ಅಪ್ಪು ಸರ್ ಗೆ ಧನ್ಯವಾದಗಳು. ಹಾಗೂ ಆಗಮಿಸಿ ಆಶೀರ್ವದಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ರಿಷಭ್ ಶೆಟ್ಟೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಪ್ರತಿಯೊಬ್ಬರು ಚೆಂಡು ಹೊವಿನ ಹಾರವನ್ನು ಕೊರಳಿಗೆ ಹಾಕಿಕೊಂಡು ಫೋಟೋಗೆ ಪೋಸ್ ಕೊಟ್ಟಿರುವುದು ವಿಶೇಷವಾಗಿದೆ.
ಈ ಹಿಂದೆ ಬೆಲ್ ಬಾಟಂ ಸಿನಿಮಾ ರಿಷಭ್ ಶೆಟ್ಟಿಯವರಿಗೆ ಉತ್ತಮ ಯಶಸ್ಸನ್ನು ತಂದು ಕೊಟ್ಟಿತ್ತು. ಇದೀಗ ಬೆಲ್ ಬಾಟಂ 2 ಸಿನಿಮಾ ಭರ್ಜರಿಯಾಗಿ ಮೂಹುರ್ತ ನೆರವೇರಿಸಿಕೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಾಥ್ ನೀಡಿದ್ದಾರೆ. ಮಹೂರ್ತ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದಾರೆ. ಈ ಮೂಲಕವಾಗಿ ಸಿನಿಮಾಗೆ ಕಿಕ್ ಸ್ಟಾರ್ಟ್ ನೀಡಲಾಗಿದೆ.
View this post on Instagram
ಚಿತ್ರದಲ್ಲಿ ರಿಷಬ್ ಶೆಟ್ಟಿ, ಹರಿಪ್ರಿಯಾ ಹಾಗೂ ತಾನ್ಯಾ ಹೋಪ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 80ರ ದಶಕದ ರೆಟ್ರೋ ಶೈಲಿಯಲ್ಲಿಯೇ ಈ ಸಿನಿಮಾ ಮೂಡಿ ಬರಲಿದೆ. ಚಿತ್ರತಂಡ ಈ ನಿಟ್ಟಿನಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬೆಲ್ ಬಾಟಂ ಪಾರ್ಟ್ 1 ರಲ್ಲಿ ಬಂಡವಾಳ ಹೂಡಿದ ನಿರ್ಮಾಪಕ ಸಂತೋಷ್ ಕುಮಾರ್ ಬೆಲ್ ಬಾಟಂ 2 ಸಿನಿಮಾಕ್ಕೂ ಬಂಡವಾಳ ಹೂಡಲಿದ್ದಾರೆ. ಬೆಲ್ ಬಾಟಂ 2 ಸಿನಿಮಾ ಪ್ರೇಕ್ಷಕರಿಗೆ ಮತ್ತೆ ಮನರಂಜನೆ ನೀಡಲು ಚಿತ್ರತಂಡ ಮತ್ತೊಮ್ಮೆ ಪರದೆ ಮೇಲೆ ಬರಲಿದೆ.